Thursday, August 11, 2022

Latest Posts

ಹಾವೇರಿ| ಬ್ಯಾಡಗಿ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

ಹೊಸ ದಿಗಂತ ವರದಿ, ಹಾವೇರಿ:

ಪಟ್ಟಣದ ಪುರಸಭೆಗೆ ನೂತನ ಅಧ್ಯಕ್ಷರಾಗಿ ಕವಿತಾ ಕೊಟ್ರಯ್ಯ ಸೊಪ್ಪಿನಮಠ ಉಪಾಧ್ಯಕ್ಷರಾಗಿ ಕಲಾವತಿ ಮೌನೇಶ ಬಡಿಗೇರ ಅವಿರೋಧವಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.
ಪುರಸಭೆ ಒಟ್ಟು ೨೩ ಸದಸ್ಯರಲ್ಲಿ ಬಿಜೆಪಿ ೧೭ ಹಾಗೂ ಕಾಂಗ್ರೆಸ್ ೬ ಸದಸ್ಯ ಬಲವನ್ನು ಹೊಂದಿತ್ತು. ಹೀಗಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
 ಇಬ್ಬರು ನಾಮಪತ್ರ ಸಲ್ಲಿಕೆ
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿಯಿತ್ತು. ಆದರೆ ನಾಮ ಪತ್ರ ಸಲ್ಲಿಸುವ ಕೊನೆಗಳಿಗೆಯಲ್ಲಿ ಪಕ್ಷದ ಹಿರಿಯರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಕೊಟ್ರಯ್ಯ ಸೊಪ್ಪಿನಮಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಲಾವತಿ ಮೌನೇಶ ಬಡಿಗೇರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಇವರಬ್ಬರು ಅವಿರೋಧವಾಗಿ ಆಯ್ಕೆಗೊಂಡರು.
 ಹಾಲಿ ಮಾಜಿ ಶಾಸಕರು ನೇತೃತ್ವ
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಅ-ವರ್ಗದ ಮಹಿಳೆಗೆ ಮೀಸಲಾದ ಹಿನ್ನಲೆಯಲ್ಲಿ ಕಳೆದ ೧೫ ದಿನಗಳಿಂದ ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕೇರಲು ತೀವ್ರ ಪೈಪೋಟಿ ನಡೆಸಿದ್ದರು. ನ.೫.ರಂದು ಜರುಗಿದ ಕೋರ ಕಮೀಟಿಯಲ್ಲಿ ಹಾಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಸೇರಿದಂತೆ ಹಿರಿಯ ಮುಖಂಡರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಅಂತಿಮವಾಗಿ ಆಯ್ಕೆ ಪ್ರಕ್ರೀಯೆ ಜರುಗಿತ್ತು.
ಈ ಸಂದರ್ಭದಲ್ಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಪುರಸಭೆ ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಈರಣ್ಣ ಬಣಕಾರ, ಚಂದ್ರಪ್ಪ ಶೆಟ್ಟರ, ಸರೋಜ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಶಿವರಾಜ ಅಂಗಡಿ, ಸುಭಾಷ ಮಾಳಗಿ. ಗಂಗಮ್ಮ ಪಾಟೀಲ, ಮಂಜಣ್ಣ ಬಾರ್ಕಿ, ಸಂಜೀವ ಮಡಿವಾಳರ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss