Tuesday, July 5, 2022

Latest Posts

ಹಾವೇರಿ| ಶನಿವಾರ ಬಾಲಕಿ ಸೇರಿದಂತೆ ಒಟ್ಟು ನಾಲ್ವರಲ್ಲಿ ಕೊರೋನಾ ಸೋಂಕು ಪಾಸಿಟಿವ್

ಹಾವೇರಿ: ಕೊರೋನಾ ಮಹಾಮಾರಿ ಸೋಂಕು ಜಿಲ್ಲೆಯಲ್ಲಿ ಓರ್ವ ಹೆಣ್ಣು ಮಗಳು ಸೇರಿದಂತೆ ಒಟ್ಟು ನಾಲ್ವರಲ್ಲಿ ದೃಢ ಪಡುವ ಮೂಲಕ ತನ್ನ ಕರಾಳ ಬಾಹುವನ್ನು ಹಂತ ಹಂತವಾಗಿ ಚಾಚುತ್ತ ಸಾಗುತ್ತಿದೆ.
ಸೋಂಕಿತರಲ್ಲಿ ೧೯ ವರ್ಷದ ಗಂಡು ಪಿ-೨೮೫೬, ೧೩ ವರ್ಷ ಗಂಡು ಪಿ-೨೮೫೭, ೧೫ ವರ್ಷ ಗಂಡು ಪಿ-೨೮೫೮ ಹಾಗೂ ೧೧ ವರ್ಷದ ಹೆಣ್ಣು ಮಗಳು ಪಿ-೨೮೫೯ ಆಗಿದ್ದಾರೆ. ಇವರೆಲ್ಲರೂ ಸಂಬಂಧಿಕರಾಗಿದ್ದಾರೆ. ಸೋಂಕಿತರು ಈಶ್ವರ ನಗರದ ದಿ.ದೇವರಾಜು ಅರಸ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್‌ದಲ್ಲಿ ಇದ್ದವರಾಗಿದ್ದಾರೆ
ಪ್ರಸಕ್ತ ಕೊರೋನಾ ಸೋಂಕು ದೃಢ ಪಟ್ಟಿರುವ ನಾಲ್ಕು ಜನರೆಲ್ಲರೂ ಮಹಾರಾಷ್ಟ್ರದ ಥಾಣಾ ಜಿಲ್ಲೆಯ ಪಾಂಡ ಪಾಡ್ವಾದ ಕಲ್ವಾದಿಂದ ಜಿಲ್ಲೆಯ ರಾಣೇಬೆನ್ನೂರಿಗೆ ಆಗಮಿಸಿದವರಾಗಿದ್ದಾರೆ. ಇವರು ಮಹಾರಾಷ್ಟ್ರ ರಾಜ್ಯದಲ್ಲಿ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದವರು.
ಮಹಾರಾಷ್ಟ್ರದಿಂದ ಜಿಲ್ಲೆಗೆ ಸೇವಾ ಸಿಂಧು ಪಾಸ್ ಪಡೆದು ಬಂದಿದ್ದ ೮೯ ಜನರಲ್ಲಿ ೬೭ ಜನರ ಗಂಟಲು ದ್ರವ್ಯದ ಪ್ರಯೋಗಾಲಯದ ವರದಿಯಲ್ಲಿ ಇವರೆಗೆ ೮ ಜನರಿಗೆ ಸೋಂಕು ದೃಢಪಟ್ಟಿದ್ದರೆ ೫೯ ಜನರ ವರದಿ ನೆಗೆಟಿವ್ ಬಂದಿದೆ. ಇನ್ನು ೨೨ ಜನರ ವರದಿ ಬರ ಬೇಕಾಗಿದೆ.
ಇವರು ಮೂಲತ: ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ತುಮ್ಮಿನಕಟ್ಟೆ ಗ್ರಾಮದರಾಗಿದ್ದಾರೆ. ಸದ್ಯ ರಾಣೇಬೆನ್ನೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸಲಾಗಿದೆ. ಪಾಸಿಟಿವ್ ವ್ಯಕ್ತಿಗಳನ್ನು ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈವರೆಗೆ ೧೪ ಪಾಸಿಟಿವ್ ವರದಿಯಾಗಿವೆ ಇವರಲ್ಲಿ ಇಗಾಗಲೆ ೩ ಜನ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ೧೧ಪ್ರಕರಣ ಸಕ್ರಿಯವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss