Wednesday, June 29, 2022

Latest Posts

ಹಾವೇರಿ| ಸಂತೆ ಕಟ್ಟೆ ನಿರ್ಮಾಣ ಕಾರ್ಯಕ್ಕೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಚಾಲನೆ

ಹಾವೇರಿ: ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಸಂತೆ ಕಟ್ಟೆ ನಿರ್ಮಾಣಕ್ಕೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಗ್ರಾಮದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಗ್ರಾಮೀಣ ಸಂತೆ ಕಟ್ಟೆಯನ್ನು ೩೩.೬ ಲಕ್ಷ ರೂಗಳಲ್ಲಿ ೧೭ಮೀ ಉದ್ದ ಮತ್ತು ೧೫ಮೀ ಅಗಲ ನಿರ್ಮಿಸಲಾಗುತ್ತಿದ್ದು ಇದನ್ನು ಭೂಸೇನಾ ನಿಗಮ ನಿರ್ಮಿಸುತ್ತಿದೆ ಎಂದರು.
ಈ ಸಮಯದಲ್ಲಿ ತಾ.ಪ.ಅಧ್ಯಕ್ಷ ತಿರಕಪ್ಪ ಕೊಳಣ್ಣನವರ, ತಾ.ಪಂ ಮಾಜಿ ಅದ್ಯಕ್ಷ ರುದ್ರಪ್ಪ ಹಾವೇರಿ, ಕುಕ್ಕನಗೌಡ ಕರಿಗೌಡದರ ತೋಟನಗೌಡ, ಎಪಿಎಂಸಿ ಸದಸ್ಯ ಸಣ್ಣಪ್ಪ ಮಾಳಿ, ಬಸವರಾಜ ಬಂಕಾಪೂರ, ರಾಮು ಮಾಳಗಿ, ಶಿದ್ಲಿಂಗಪ್ಪ ಹೊಸಕೇರಿ, ಕರಬಸಪ್ಪ ಹೊಸಳ್ಳಿ, ಶಿದ್ಲಿಂಗಪ್ಪ ಸೋಟಾರಿ, ಶಂಬಣ್ಣ ಮತ್ತಿಹಳ್ಳಿ, ಸಂಜೀವಕುಮಾರ ದಿಡ್ಡಿ, ಚಂದ್ರಗೌಡ ಕುಕ್ಕನಗೌಡ್ರ, ಪಾಪಣ್ಣ ಗಿರಿಗೌಡ್ರ, ಸೋಮಣ್ಣ ಲಮಾಣಿ, ಪರಮೇಶ ಲಮಾಣಿ, ಸತೀಶ ತಿಮ್ಮಣ್ಣನವರ, ಪ್ರವೀಣ ಸವಣೂರ, ರಾಮು ಮಾಳಿ, ಶಾಸಕರ ಆಪ್ತ ಸಹಾಯಕ ಹೊನ್ನಪ್ಪ ಅಗಸಿಬಾಗಿಲ ಸೇರಿದಂತೆ ಮುಂತಾದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss