Monday, August 8, 2022

Latest Posts

ಹಾವೇರಿ| ಸರ್ಕಾರಿ ವೈದ್ಯ, ಆರೋಗ್ಯ, ಪೊಲೀಸ್, ಶಿಕ್ಷಣ, ಬ್ಯಾಂಕ್ ಉದ್ಯೋಗಿ ಸೇರಿದಂತೆ 90 ಜನರಿಗೆ ಕೊರೋನಾ ದೃಢ, 88 ಜನರು ಗುಣಮುಖ

ಹಾವೇರಿ:   ಸರ್ಕಾರಿ ವೈದ್ಯ, ಆರೋಗ್ಯ, ಪೊಲೀಸ್, ಶಿಕ್ಷಣ ಹಾಗೂ ಬ್ಯಾಂಕ್ ಉದ್ಯೋಗಿ ಸೇರಿದಂತೆ ೯೦ ಜನರಿಗೆ ಕೊರೋನಾ ದೃಢ, ಓರ್ವ ಮರಣ, ೮೮ ಜನರು ಗುಣಮುಖ.
ಸರ್ಕಾರಿ ವೈದ್ಯ, ಆರೋಗ್ಯ, ಪೊಲೀಸ್, ಶಿಕ್ಷಣ ಹಾಗೂ ಬ್ಯಾಂಕ್ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ೯೦ ಜನರಿಗೆ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿದೆ ಹಾಗೂ ೮೮ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೧೬೬೯ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೯೧೩ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಓರ್ವ ಮೃತ ಹೊಂದಿದ್ದು ಈವರೆಗೆ ೩೩ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೧೫೩ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೫೭೦ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಒಟ್ಟಾರೆ ೭೨೩ ಸಕ್ರಿಯ ಪ್ರಕರಣಗಳಿವೆ.
ಬ್ಯಾಡಗಿ ತಾಲೂಕಿನಲ್ಲಿ ೩, ಹಾನಗಲ್ ೫, ಹಾವೇರಿ ೧೧, ಹಿರೇಕೆರೂರು ೧೧, ರಾಣೇಬೆನ್ನೂರು ೪೦, ಸವಣೂರ ೮, ಶಿಗ್ಗಾಂವ ತಾಲೂಕಿನಲ್ಲಿ ೧೨ ಪ್ರಕರಣಗಳು ಇಂದು ದೃಢಪಟ್ಟಿವೆ. ಸೋಂಕಿನಿಂದ ಗುಣಮುಖರಾಗಿ ಸವಣೂರಿನ ತಾಲೂಕಿನ ೯, ಶಿಗ್ಗಾಂವ ೨, ರಾಣೇಬೆನ್ನೂರು ೮, ಹಾವೇರಿ ೪೫, ಬ್ಯಾಡಗಿ ೪, ಹಾನಗಲ್ ೪, ಹಿರೇಕೆರೂರು ತಾಲೂಕಿನ ೧೬ ಜನರು ಬಿಡುಗಡೆ ಹೊಂದಿದ್ದರೆ ರಾಣೇಬೆನ್ನೂರ ನಗರದ ೬೫ ವರ್ಷದ ಪುರುಷ ಮೃತಪಟ್ಟಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss