Saturday, August 13, 2022

Latest Posts

ಹಾವೇರಿ| ಸರ್ಕಾರಿ ವೈದ್ಯ, ಪೊಲೀಸ್ ಹಾಗೂ ಲ್ಯಾಬ್‌ಟೆಕ್ನಿಷಿಯನ್ ಸಹಿತ 45 ಜನರಿಗೆ ಕೋವಿಡ್ ಸೋಂಕು ದೃಢ

ಹಾವೇರಿ: ಸರ್ಕಾರಿ ವೈದ್ಯರು, ಪೊಲೀಸ್ ಹಾಗೂ ಲ್ಯಾಬ್‌ಟೆಕ್ನಿಷಿಯನ್ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ೪೫ ಜನರಿಗೆ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿದೆ ಹಾಗೂ ೭೬ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೧೮೮೯ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೧೦೯೮ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಮೂರು ಮರಣ ಪ್ರಕರಣ ಸೇರಿ ಒಟ್ಟಾರೆ ೩೯ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೨೦೨ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೫೫೦ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಒಟ್ಟಾರೆ ೭೫೨ ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೬, ಹಾನಗಲ್ ೩, ಹಾವೇರಿ ೯, ಹಿರೇಕೆರೂರ ೪, ರಾಣೇಬೆನ್ನೂರ ೯, ಸವಣೂರ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ತಲಾ ೭ ಜನರಿಗೆ ಸೋಂಕು ದೃಢಪಟ್ಟಿದೆ. ಸವಣೂರು- ೭, ಶಿಗ್ಗಾಂವ ೧೫, ರಾಣೇಬೆನ್ನೂg ೬, ಹಾವೇರಿ ೨೯, ಬ್ಯಾಡಗಿ ೨, ಹಾನಗಲ್ ೧೧ ಹಾಗೂ ರೇಕೆರೂರು ತಾಲೂಕಿನ ೬ ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss