Monday, August 8, 2022

Latest Posts

ಹಾಸನದಲ್ಲಿಂದು ಓರ್ವನಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 238ಕ್ಕೆ ಏರಿಕೆ

ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿದ್ದು, ಭಾನುವಾರ ಒಂದು ಪ್ರಕರಣ ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 238ಕ್ಕೆ ಏರಿದೆ.
238 ಸೋಂಕಿತರ ಪೈಕಿ ಚನ್ನರಾಯಪಟ್ಟಣ 160,ಹೊಳೆನರಸೀಪುರ 26,ಹಾಸನ 17,ಆಲೂರು 15,ಅರಕಲಗೂಡು 9, ಬೇಲೂರು 7 ಹಾಗೂ ಅರಸೀಕೆರೆ ನಾಲ್ವರು ಸೋಂಕಿನಿಂದ ಬಾಧಿತರಾಗಿದ್ದಾರೆ. ಈವರೆಗೂ 186 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 56 ಮಂದಿಯಲ್ಲಿ ಸೋಂಕು ಇನ್ನು ಸಕ್ರಿಯವಾಗಿದೆ.
ಭಾನುವಾರ ಸೋಂಕು ದೃಢಪಟ್ಟಿರುವ ವ್ಯಕ್ತಿ ಕೂಡ 62 ವರ್ಷದ ವೃದ್ಧರಾಗಿದ್ದು, ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಒಂದು ಪ್ರಕರಣ ಮಾತ್ರ ಕೋವಿಡ್ ನಿಂದ ಸಾವನ್ನಪ್ಪಿರುವುದು ದೃಢವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss