ಹಾಸನದಲ್ಲಿ ಮತ್ತೆ 13 ಜನರಲ್ಲಿ ಕೊರೋನಾ ಸೋಂಕು ಪತ್ತೆ: ಒಟ್ಟಾರೆ ಸಂಖ್ಯೆ ‌67ಕ್ಕೆ ಏರಿಕೆ

0
112

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿದ್ 19 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 67 ಕ್ಕೆ ಏರಿಕೆ‌ಯಾಗಿದೆ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ‌ ಮಾಹಿತಿ ನೀಡಿದ ಅವರು ಇಂದು ವರದಿಯಾದ ಪ್ರಕರಣಕಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ ಎಂದರು.

ಹಾಸನ ಜಿಲ್ಲೆಯ ಪಾಲಿಗೆ ಮಹಾರಾಷ್ಟ್ರ ದಿಂದ ಅಗಮಿಸಿದವರಿಂದ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ ಗುರುವಾರ ಸೋಂಕು ಪತ್ತೆಯಾದವರಲ್ಲಿ ಆರು ಮಂದಿ ಹೊಳೆನರಸೀಪುರ ತಾಲ್ಲೂಕು ‌ಹಾಗೂ 7 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿಗೆ ‌ಸೇರಿದವಾರಾಗಿದ್ದಾರೆ ಎಂದು ಹೇಳಿದರು.

ಈವರಗಿನ ವರದಿಯಂತೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಗರಿಷ್ಠ 42 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಳೆನರಸೀಪುರ 16 ಆಲೂರು ತಾಲ್ಲೂಕಿನಲ್ಲಿ 3 ಅರಕಲಗೂಡು 2 ಅರಸೀಕೆರೆ 1, ಹಾಸನದಲ್ಲಿ ಮೂರು ಪ್ರಕರಣ ದಾಖಲಾಗಿವೆ ಎಂದು ಅವರು ವಿವರ ಒದಗಿಸಿದರು.

ಹಾಸನ‌ ತಲ್ಲೂಕಿನ ಮೂರು ಪ್ರಕರಣಗಳಲ್ಲಿ ಎರಡು ತಮಿಳುನಾಡು ಮೂಲದಿಂದ ಬಂದಿದ್ದು ಉಳಿದ ಜಿಲ್ಲೆಯ ಇತರ ಎಲ್ಲಾ 65 ಪ್ರಕರಣಗಳು ಮಹಾರಾಷ್ಟ್ರ ದಿಂದ ಆಗಮಿಸಿದವರಲ್ಲಿ ಧೃಡಪಟ್ಟಿದೆ.

ಎಲ್ಲಾ ಸೋಂಕಿತರನ್ನು‌ ಹಾಸನದ ಕೋವಿದ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಶಂಕಿತರು ವಿವಿಧ ತಾಲ್ಲೂಕುಗಳಲ್ಲಿ ಸಾಂಸ್ಥಿಕ ಕೇಂದ್ರಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

LEAVE A REPLY

Please enter your comment!
Please enter your name here