ಹಾಸನ: ಹಾಸನದ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಹಿನ್ನೆಲೆಯಲ್ಲಿ,ಜಲಾಶಯ ಆರು ಕ್ರಸ್ಟ್ ಗೇಟ್ಗಳ ಮೂಲಕ 20000ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಜಲಾಶಯ ಭತಿ೯ಗೆ ಕೇವಲ 10 ಅಡಿ ಬಾಕಿ ಇರುವುದರಿಂದ ಭದ್ರತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದ್ದು,ಶುಕ್ರವಾರ ರಾತ್ರಿ ವೇಳೆಗೆ ನೀರು ಹೊರ ಹರಿಸಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಸಾವ೯ಜನಿಕರಿಗೆ ಜಲಾಶಯ ಭೇಟಿಗೆ ನಿಬ೯ಂಧ ವಿಧಿಸಲಾಗಿದ್ದು,ದೂರದಿಂದಲೇ ಹೇಮೆಯ ವೈಭವವನ್ನು ಜನತೆ ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಶನಿವಾರ ಮುಂಜಾನೆಗೆ ಹೇಮೆಗೆ ಒಳಹರಿವು 50,000ಕ್ಯೂ ಇದ್ದು,ಜಲಾಶಯ ಭತಿ೯ಗೆ ಕೇವಲ ಆರು ಅಡಿ ಬಾಕಿ ಇದೆ.ಜಲಾಶಯ ಕೇವಲ ಮೂರು ದಿನದ ಮಳೆಗೆ ತುಂಬಿರುವುದು ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತ ವಗ೯ದಲ್ಲಿ ಸಂತಸ ಮೂಡಿಸಿದ್ದು,ಕೃಷಿ ಚಟುವಟಿಕೆಗಳು ಗರಿಗೆದರಿವೆ.