Sunday, August 14, 2022

Latest Posts

ಹಾಸನ: ಕೋವಿಡ್ ಗೆ ಖ್ಯಾತ ವೈದ್ಯ ಡಾ.ರಾಜೀವ್ ಬಲಿ

ಹಾಸನ: ನಗರದ ಖ್ಯಾತ ವೈದ್ಯ ಡಾ.ರಾಜೀವ್(66) ಕೋವಿಡ್ ಗೆ ಬಲಿಯಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ದೃಢಪಟ್ಟು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.

ಮಕ್ಕಳ ತಜ್ಞರಾಗಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದ ಡಾ.ರಾಜೀವ್ ಅಪಾರ ಜನ ಮನ್ನಣೆಗಳಿಸಿದ್ದರು. ಡಾ.ರಾಜೀವ್ ತಮ್ಮ ಹೆಸರಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆ ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿದ್ದು,ಶಿಕ್ಷಣ ಕ್ಷೇತ್ರದಲ್ಲಿಯು ಛಾಪು ಮೂಡಿಸಿದ್ದರು.
ಮೃತ ವೈದ್ಯರು ಪತ್ನಿ ಹಾಗೂ ಓವ೯ ಪುತ್ರ,ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss