Wednesday, August 17, 2022

Latest Posts

ಹಾಸನ ಜಿಲ್ಲೆಯಲ್ಲಿಂದು 451 ಕೊರೋನಾ ಪ್ರಕರಣಗಳು ಪತ್ತೆ, 9 ಮಂದಿ ಬಲಿ 

ಹಾಸನ:  ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 9 ಮಂದಿ ಮೃತರಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ. ಹೊಸದಾಗಿ 451 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 16,799ಕ್ಕೆ ಏರಿಕೆಯಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ 3,424 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 13,044 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 48 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಸೋಂಕು ಪತ್ತೆಯಾದ 451 ಕೊರೋನಾ ಸೋಂಕು ಪ್ರಕರಣಗಳಲ್ಲಿ 78 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 55 ಮಂದಿ ಚನ್ನರಾಯಪಟ್ಟಣ , ಆಲೂರು 23 , 193 ಮಂದಿ ಹಾಸನ , 41 ಮಂದಿ ಹೊಳೆನರಸೀಪುರ, 35 ಮಂದಿ ಅರಕಲಗೂಡು, ಬೇಲೂರು 15 ಮಂದಿ, ಸಕಲೇಶಪುರ ತ 10 ಮಂದಿ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!