Thursday, June 30, 2022

Latest Posts

ಹಾಸನ ಜಿಲ್ಲೆಯಲ್ಲಿ ಇಂದು ಕೊರೋನಾ ಗೆ ಮೂವರು ಬಲಿ

ಹಾಸನ: ಜಿಲ್ಲೆಯಲ್ಲಿ ಕೋವಿಡ್ ನರ್ತನ ಮುಂದುವರೆದಿದ್ದು, ಭಾನುವಾರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ತೀವ್ರ ಆತಂಕ ಹುಟ್ಟುಹಾಕಿದೆ. ಭಾನುವಾರ ಮೃತಪಟ್ಟ ಮೂವರ ಪೈಕಿ ಆಲೂರು ಮೂಲದ 47ರ ಮಹಿಳೆ, ಹಾಸನ ಮೂಲದ 57 ಹಾಗೂ 60ರ ಪುರುಷರು ಸೇರಿದ್ದಾರೆ.
ಹಾಸನ ನಗರದ 57 ವರ್ಷದ ಸೋಂಕಿತ ವ್ಯಕ್ತಿಯು ಜು.5ರಂದು ಕೋವಿಡ್ ದೃಢಪಟ್ಟು ಚಿಕಿತ್ಸೆಗೆ ದಾಖಲಾಗಿದ್ದರು. ಜು.10ರಿಂದ ಐಸಿಯುವಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಹೃದ್ರೋಗದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಆಲೂರು ಮೂಲದ ಮಹಿಳೆ ಜು.11ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಜು.12ರ ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃಪಟ್ಟಿದ್ದಾರೆ ಹಾಗೆಯೇ 60 ಪುರುಷ ಸೋಂಕಿತ ವ್ಯಕ್ತಿಯು ಮಧುಮೇಹ ಸೇರಿದಂತೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಡಿಎಚ್ಓ ಸತೀಶ್ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss