Wednesday, August 17, 2022

Latest Posts

ಹಾಸನ ಜಿಲ್ಲೆಯಲ್ಲಿ ಗುರುವಾರ 400 ದಾಟಿದ ಸೋಂಕಿತರ ಸಂಖ್ಯೆ, ಒಂದೇ ದಿನ 13 ಬಲಿ

ಹಾಸನ: ಕೆಲ ದಿನಗಳಿಂದ ಜಿಲ್ಲೆಯಲ್ಲಿ ತುಸು ಕಡಿಮೆಯಾಗಿದ್ದ ಕೊರೊನಾ ಮಹಾಮಾರಿ ಅಟ್ಟಹಾಸ ಗುರುವಾರ ಮತ್ತೆ ಹೆಚ್ಚಳವಾಗಿದೆ. ಹೊಸದಾಗಿ ೪೧೯ ಪಾಸಿಟಿವ್ ಕೇಸ್ ಪತ್ತೆ ಯಾಗಿದ್ದು, ಆಲೂರು ತಾಲೂಕಿನಲ್ಲಿ ೧೪, ಅರಕಲಗೂಡು ೭೦, ಅರಸೀಕೆರೆ ೬೫, ಬೇಲೂರು ೮, ಚನ್ನರಾಯಪಟ್ಟಣ ೫೦, ಹಾಸನ ೧೮೬, ಹೊಳೆನರಸೀಪುರ ೭, ಸಕಲೇಶಪುರ ೧೭ ಮತ್ತು ಹೊರ ಜಿಲ್ಲೆಯ ೨ ಪ್ರಕರಣ ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೪,೬೮೭ ಕ್ಕೆ ಏರಿಕೆಯಾಗಿದೆ.
೨೫೮೩ ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ೪೯ ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಗುರುವಾರ ೨೧೨ ಮಂದಿ ಸೇರಿ ಈವರೆಗೆ ೧೧,೮೧೫ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತಾಲ್ಲೂಕುವಾರು ಒಟ್ಟು ಪಾಸಿಟಿವ್ ಕೇಸ್:
ಆಲೂರು ೫೧೧, ಅರಕಲಗೂಡು ೧೪೦೨, ಅರಸೀಕೆರೆ ೧೮೬೩, ಬೇಲೂರು ೧೦೩೯, ಚನ್ನರಾಯಪಟ್ಟಣ ೧೯೮೮, ಹಾಸನ ೬೧೮೭, ಹೊಳೆನರಸೀಪುರ ೧೦೮೩, ಸಕಲೇಶಪುರ ೫೨೯, ಹೊರ ಜಿಲ್ಲೆ ೮೫.
ಒಂದೇ ದಿನ ೧೩ ಬಲಿ:
ಕಳವಳಕಾರಿ ಸಂಗತಿ ಎಂದರೆ ಕೊರೊನಾ ಮಹಾಮಾರಿಗೆ ಗುರುವಾರ ಒಂದೇ ದಿನ ೧೩ ಮಂದಿ ಬಲಿಯಾಗಿದ್ದಾರೆ. ಇದು ಜಿಲ್ಲೆಯಲ್ಲಿ ಕರಾಳ ಕೊರೊನಾ ಇತಿಹಾಸದಲ್ಲಿ ಅತ್ಯಧಿಕ ಸಂಖ್ಯೆಯಾಗಿದೆ. ಈ ಮೂಲಕ ಒಟ್ಟು ಬಲಿಯಾದವರ ಸಂಖ್ಯೆ ೨೮೯ ಕ್ಕೆ ಏರಿಯಾಗಿದೆ. ಸೋಂಕು ಜೊತೆಗೆ ಸಾವೂ ಹೆಚ್ಚಾಗುತ್ತಿರುವುದು ಸಹಜವಾಗಿಯೇ ದೊಡ್ಡ ಆತಂಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!