Monday, August 8, 2022

Latest Posts

ಹಾಸನ ಜಿಲ್ಲೆಯಲ್ಲಿ ಭಾನುವಾರ 142 ಮಂದಿಗೆ ಕೋವಿಡ್-19 ಪ್ರಕರಣ ಪತ್ತೆ, 35 ಮಂದಿ ಗುಣಮುಖ

ಹಾಸನ:  ಜಿಲ್ಲೆಯಲ್ಲಿ ಇಂದು ಹೊಸದಾಗಿ 142 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 2417 ಕ್ಕೆ ಏರಿಕೆಯಾಗಿದೆ. ಇಂದು 35 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು,ಈವರೆಗೆ 1057 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ 1295 ಮಂದಿ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ಇಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೆ ಒಟ್ಟು 65 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ 77 ವರ್ಷದ ಮಹಿಳೆ ಹಾಗೂ ಹಾಸನ ತಾಲ್ಲೂಕಿನ 31 ವರ್ಷದ ವ್ಯಕ್ತಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇಂದು ಪತ್ತೆಯಾದ 142 ಪ್ರಕರಣಗಳಲ್ಲಿ 12 ಜನ ಅರಸೀಕೆರೆ ತಾಲ್ಲೂಕಿನವರು, 29 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, 48 ಜನ ಹಾಸನ ತಾಲ್ಲೂಕು, 22 ಜನ ಹೊಳೆನರಸೀಪುರ ತಾಲ್ಲೂಕು, ಆಲೂರು ತಾಲ್ಲೂಕಿನಲ್ಲಿ 5 ಜನ, 23 ಜನ ಅರಕಲಗೂಡು ತಾಲ್ಲೂಕು , ಒಬ್ಬರು ಬೇಲೂರು ತಾಲ್ಲೂಕಿನವರು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss