Wednesday, August 10, 2022

Latest Posts

ಹಾಸನ ಜಿಲ್ಲೆಯಲ್ಲಿ ಮಂಗಳವಾರ 187 ಮಂದಿಗೆ ಕೊರೋನಾ ಪಾಸಿಟಿವ್, 45 ಮಂದಿ ಗುಣಮುಖ

ಹಾಸನ: ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಮಹಾಸ್ಫೋಟವೇ ಸಂಭವಿಸಿದ್ದು,ಒಂದೇ ದಿನ 187 ಮಂದಿಗೆ ಮಹಾಮಾರಿ ವಕ್ಕರಿಸಿದೆ.
ಹಾಸನ ತಾಲೂಕೊಂದರಲ್ಲೇ ಇಂದು 116 ಮಂದಿಗೆ ಸೋಂಕು ವಕ್ಕರಿಸಿದ್ದು, ಅರಸೀಕೆರೆ 5, ಚನ್ನರಾಯಪಟ್ಟಣ 19, ಅರಕಲಗೂಡು 9, ಹೊಳೆನರಸೀಪುರ17, ಸಕಲೇಶಪುರ 6, ಆಲೂರು 2, ಬೇಲೂರು 12, ಇತರ ಜಿಲ್ಲೆ 1 ಪ್ರಕರಣ ದಾಖಲಾಗಿದೆ.
ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2735 ಕ್ಕೆ ಏರಿಕೆಯಾಗಿದ್ದು,1560 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇಂದು 45 ಮಂದಿ ಸೇರಿ 1102
ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 45 ಮಂದಿ ಸೋಂಕಿತರಿಗೆ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ ಇದುವರೆಗಿನ ಸೋಂಕಿತರ ಪೈಕಿ ಚನ್ನರಾಯಪಟ್ಟಣ 454, ಆಲೂರು 96, ಅರಸೀಕೆರೆ 422, ಹಾಸನ 1019, ಅರಕಲಗೂಡು 200, ಹೊಳೆನರಸೀಪುರ 266, ಸಕಲೇಶಪುರ 88, ಬೇಲೂರು 175, ಹೊರ ಜಿಲ್ಲೆ 15 ಮಂದಿ ಇದ್ದಾರೆ.
ಇಂದೂ ಸಹ ಕೊರೊನಾ ಮಹಾಮಾರಿಗೆ ಮತ್ತೆ ಮೂವರು ಬಲಿಯಾಗಿದ್ದು,
ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 73 ಕ್ಕೇರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss