Tuesday, August 9, 2022

Latest Posts

ಹಾಸನ ಜಿಲ್ಲೆಯಲ್ಲಿ ಮಂಗಳವಾರ 476 ಮಂದಿಗೆ ಕೊರೋನಾ ಪಾಸಿಟಿವ್, 11 ಮಂದಿ ಸೋಂಕಿಗೆ ಬಲಿ

ಹಾಸನ: ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಂಗಳವಾರ ಬರೋಬ್ಬರಿ 11 ಮಂದಿ ಕೋವಿಡ್
ಸೋಂಕಿನಿಂದ ಪ್ರಾಣ ತೆತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 322ಕ್ಕೆ ಏರಿದ್ದು, ನಿರಂತರ ಸಾವುಗಳು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದೆ.
ಮಂಗಳವಾರ ಬರೋಬ್ಬರಿ 476 ಪ್ರಕರಣ ವರದಿಯಾಗಿದ್ದು, ಸೋಂಕು ದೃಢಪಟ್ಟವರ ಪೈಕಿ ಆಲೂರು 30, ಅರಕಲಗೂಡು 45, ಅರಸೀಕೆರೆ 34, ಬೇಲೂರು 91, ಚನ್ನರಾಯಪಟ್ಟಣ 44, ಹಾಸನ 184, ಹೊಳೆನರಸೀಪುರ 34, ಸಕಲೇಶಪುರ 11 ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16348 ಕ್ಕೆ ಏರಿಕೆಯಾಗಿದ್ದು, 3251 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.ಮಂಗಳವಾರ 148 ಮಂದಿ ಸೇರಿ ಒಟ್ಟಾರೆ 12775 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು,51 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈವರೆಗಿನ ಒಟ್ಟು ಸೋಂಕಿತರ ಪೈಕಿ ಆಲೂರು 604, ಅರಕಲಗೂಡು 1568, ಅರಸೀಕೆರೆ 2034, ಬೇಲೂರು 1202, ಚನ್ನರಾಯಪಟ್ಟಣ 2272, ಹಾಸನ 6795, ಹೊಳೆನರಸೀಪುರ 1195, ಸಕಲೇಶಪುರ 586, ಹೊರ ಜಿಲ್ಲೆ 92 ಮಂದಿ ಸೇರಿದ್ದಾರೆ.
ಹಾಸನ ತಾಲೂಕೊಂದರಲ್ಲೇ ಆರೂವರೆ ಸಾವಿರ ದಾಟಿದ ಪಾಸಿವ್ ಕೇಸ್ ದಾಖಲಾಗಿದ್ದು, ಮತ್ತೊಂದೆಡೆ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss