ಹಾಸನ: ಜಿಲ್ಲೆಯಲ್ಲಿ ಶನಿವಾರವೂ ಸಹ ಕೊರೋನಾ ಶತಕದ ಹೊಸ್ತಿಲು ದಾಟಿದ್ದು, 178 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.
ಈವರೆಗೂ ಜಿಲ್ಲೆಯಲ್ಲಿ ಒಟ್ಟು 24889 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಶನಿವಾಸ ಆಸ್ಪತ್ರೆಯಿಂದ ಬಿಡುಗಡೆಯಾದ 137 ಮಂದಿ ಸೇರಿ ಒಟ್ಟು ಇಲ್ಲಿಯವರೆಗೂ 23348 ಮಂದಿ ಆಸ್ಪತ್ರೆಯಿಂದ ಬಿಡುಗಡೆಯೊಂದಿದ್ದಾರೆ.
1116 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 40 ಮಂದಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಶನಿವಾರ ಸೋಂಕು ದೃಢಪಟ್ಟವರ ಪೈಕಿ ಅರಕಲಗೂಡು 9,ಅರಸೀಕೆರೆ 27, ಬೇಲೂರು 20, ಚನ್ನರಾಯಪಟ್ಟಣ 41, ಹಾಸನ 64, ಹೊಳೆನರಸೀಪುರ 15, ಸಕಲೇಶಪುರ 2 ಸೇರಿದಂತೆ 178 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಪೈಕಿ ಆಲೂರು-888,ಅರಕಲಗೂಡು-2396, ಅರಸೀಕೆರೆ 2886,ಬೇಲೂರು 1831,ಚನ್ನರಾಯಪಟ್ಟಣ 3474,ಹಾಸನ 10543, ಹೊಳೆನರಸೀಪುರ 1826,ಸಕಲೇಶಪುರ 908 ಹಾಗೂ ಹೊರ ಜಿಲ್ಲೆಯ 137 ಮಂದಿ ಸೇರಿದ್ದಾರೆ.