Monday, August 8, 2022

Latest Posts

ಹಾಸನ ಜಿಲ್ಲೆಯಲ್ಲಿ ಹೊಸದಾಗಿ 150 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣ ದೃಢ, 2 ಸಾವು

ಹಾಸನ: ಜಿಲ್ಲೆಯಲ್ಲಿಂದು ಇಬ್ಬರು ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 260ಕ್ಕೆ
ಏರಿಕೆಯಾಗಿದೆ. ಹೊಸದಾಗಿ 150 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 13,208ಕ್ಕೆ ಏರಿಕೆಯಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ 2634 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 10314 ಮಂದಿ ಗುಣಮುಖರಾಗಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ 55 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಪತ್ತೆಯಾದ 150 ಕೊರೋನಾ ಸೋಂಕು ಪ್ರಕರಣಗಳಲ್ಲಿ 4 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 25 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 3 ಜನ, 61 ಮಂದಿ ಹಾಸನ ತಾಲ್ಲೂಕು, 12 ಜನ ಹೊಳೆನರಸೀಪುರ ತಾಲ್ಲೂಕು, 32 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 7 ಜನ, ಸಕಲೇಶಪುರ ತಾಲ್ಲೂಕಿನಲ್ಲಿ 5 ಜನ ಹಾಗೂ
ಹೊರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss