Wednesday, August 10, 2022

Latest Posts

ಹಾಸನ ಜಿಲ್ಲೆಯಲ್ಲಿ 136 ಮಂದಿಯಲ್ಲಿ ಕೊರೋನಾ ದೃಢ: ಸೋಂಕಿತರ ಸಂಖ್ಯೆ 3294ಕ್ಕೆ ಏರಿಕೆ, 6 ಸಾವು

ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರದೊಂದಿಗೆ ಕೊರೋನಾ ಅಬ್ಬರವು ಮುಂದುವರೆದಿದ್ದು, ಇಂದು 136 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.  ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3294ಕ್ಕೆ ಏರಿಕೆಯಾಗಿದ್ದು, 1953 ಮಂದಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಜೊತೆಗೆ 1247 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 41 ಮಂದಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಶನಿವಾರ ಸೋಂಕು ಪತ್ತೆಯಾದ ಒಟ್ಟು 136 ಮಂದಿಯ ಪೈಕಿ ಆಲೂರು 1, ಅರಕಲಗೂಡು 2, ಅರಸೀಕೆರೆ 17, ಬೇಲೂರು 5, ಚನ್ನರಾಯಪಟ್ಟಣ 22, ಹಾಸನ 74, ಸಕಲೇಶಪುರ 3 ಹಾಗೂ ಹೊಳೆರನಸೀಫುರದ 11 ಮಂದಿ ಸೇರಿದ್ದಾರೆ.
ಮುಂದುವರೆದ ಮರಣ ಮೃದಂಗ:
ಶನಿವಾರವೂ ಕೂಡ ಜಿಲ್ಲೆಯಲ್ಲಿ ಕೋವಿಡ್ ಮರಣ ಮೃದಂಗ ಮುಂದುವರೆದಿದ್ದು, ಕೋವಿಡ್ಗೆ ಇಂದು 6 ಮಂದಿ ಪ್ರಾಣ ತೆತ್ತಿದ್ದಾರೆ.
ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 94 ಮಂದಿ ಕೋವಿಡ್ ನಿಂದಾಗಿ ಉಸಿರು ಕೈ ಚೆಲ್ಲಿದ್ದು, ಶನಿವಾರ ಮೃತಪಟ್ಟ ಆರು ಜನರಲ್ಲಿ ಚನ್ನರಾಯಪಟ್ಟಣ ಮೂಲದ 65 ಹಾಗೂ 55 ವರ್ಷದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ, ಅರಸೀಕೆರೆ ಮೂಲದ 55 ವರ್ಷದ ಪುರುಷ,ಬೇಲೂರು ಮೂಲದ 49 ವರ್ಷದ ಪುರುಷ, ಹೊಳೆನರಸೀಪುರ ಮೂಲದ 38 ವರ್ಷದ ವ್ಯಕ್ತಿಯೊಬ್ಬರು ಸೇರಿದ್ದಾರೆ.
ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 6 ಜನರು ಕೊರೋನಾಗೆ ಬಲಿಯಾಗಿದ್ದು, ಜಿಲ್ಲೆಯ ಜನರಲ್ಲಿ ಕೊರೋನಾ ಸಾವುಗಳು ತೀವ್ರ ಆತಂಕ ಮೂಡಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss