ಹಾಸನ : ಜಿಲ್ಲೆಯಲ್ಲಿ ಬುಧವಾರ ಕೊರೋನಾ ದ್ವಿಶತಕ ಬಾರಿಸಿದ್ದು,ಸೋಂಕಿತರ ಸಂಖ್ಯೆ ಆರೂವರೆ ಸಾವಿರ ಗಡಿ ದಾಟಿದೆ.
ಬುಧವಾರ 153 ಮಂದಿಯಲ್ಲಿ ಸೋಂಕು ಹೊಸದಾಗಿ ದೃಢಪಟ್ಟಿದ್ದು,ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6531 ಕ್ಕೆ ಏರಿಕೆಯಾಗಿದೆ.
1977 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
4382 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು,59 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಸೋಂಕು ಕಾಣಿಸಿಕೊಂಡವರ ಪೈಕಿ ಆಲೂರು 11, ಅರಕಲಗೂಡು-14, ಅರಸೀಕೆರೆ-04, ಬೇಲೂರು-26, ಚನ್ನರಾಯಪಟ್ಟಣ-21, ಹಾಸನ-58, ಹೊಳೆನರಸೀಪುರ-16, ಸಕಲೇಶಪುರ ಮೂವರು ಸೇರಿದ್ದಾರೆ.
ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ ಆಲೂರು-192, ಅರಕಲಗೂಡು-559, ಅರಸೀಕೆರೆ-929, ಬೇಲೂರು-510, ಚನ್ನರಾಯಪಟ್ಟಣ-888, ಹಾಸನ-2629 , ಹೊಳೆನರಸೀಪುರ-598,ಸಕಲೇಶಪುರ-192, ಹೊರ ಜಿಲ್ಲೆ,-44 ಮಂದಿ ಸೇರಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಈವರೆ