Thursday, August 11, 2022

Latest Posts

ಹಾಸನ ಜಿಲ್ಲೆಯಲ್ಲಿ 255 ಮಂದಿಯಲ್ಲಿ ಕೊರೋನಾ ಸೋಂಕು ದೃಢ, 162 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಹಾಸನ : ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೋನಾ ದ್ವಿಶತಕ ದಾಟಿದ್ದು, ಒಂದೇ ದಿನ 255 ಮಂದಿರಲ್ಲಿ ಸೋಂಕು ದೃಢಪಟ್ಟಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3986 ಕ್ಕೆ ಏರಿಕೆಯಾಗಿದ್ದು, 2182 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
1688 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು,ಇಂದು ಕೂಡ 162 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 49 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಸೋಂಕು ಕಾಣಿಸಿಕೊಂಡವರ ಪೈಕಿ ಆಲೂರು-2, ಅರಕಲಗೂಡು-26, ಅರಸೀಕೆರೆ-24, ಬೇಲೂರು-21, ಚನ್ನರಾಯಪಟ್ಟಣ-35, ಹಾಸನ-112, ಹೊಳೆನರಸೀಪುರ-33, ಸಕಲೇಶಪುರ-1, ಹೊರ ಜಿಲ್ಲೆಯ ಒಬ್ಬರು ಸೇರಿದ್ದಾರೆ.
ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ ಆಲೂರು-113, ಅರಕಲಗೂಡು-335, ಅರಸೀಕೆರೆ-539, ಬೇಲೂರು-272, ಚನ್ನರಾಯಪಟ್ಟಣ-604, ಹಾಸನ-1616, ಹೊಳೆನರಸೀಪುರ-367, ಸಕಲೇಶಪುರ-119, ಹೊರ ಜಿಲ್ಲೆ,-21 ಮಂದಿ ಸೇರಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಈವರೆಗೆ 116 ಮಂದಿ ಕೊರೊನದಿಂದ ಸಾವನ್ನಪ್ಪಿದ್ದು,ಇಂದು ಕೊರೊನದಿಂದ ಆರು ಮಂದಿ ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss