Wednesday, August 17, 2022

Latest Posts

ಹಾಸನ ಜಿಲ್ಲೆಯಲ್ಲಿ 358 ಮಂದಿಯಲ್ಲಿ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 7214 ಕ್ಕೆ ಏರಿಕೆ

ಹಾಸನ:  ಜಿಲ್ಲೆಯಲ್ಲಿ ಸತತ ಎರಡನೇ ದಿನ ಕೋವಿಡ್ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದ್ದು, ಇಂದು 358 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬುಧವಾರ 358 ಮಂದಿಯಲ್ಲಿ ಸೋಂಕು ಹೊಸದಾಗಿ ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7214 ಕ್ಕೆ ಏರಿಕೆಯಾಗಿದೆ. 2255 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು,
4782 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 59 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಸೋಂಕು ಕಾಣಿಸಿಕೊಂಡವರ ಪೈಕಿ ಆಲೂರು 07, ಅರಕಲಗೂಡು-66, ಅರಸೀಕೆರೆ-50, ಬೇಲೂರು-41, ಚನ್ನರಾಯಪಟ್ಟಣ-36, ಹಾಸನ-130, ಹೊಳೆನರಸೀಪುರ-17, ಸಕಲೇಶಪುರ 7 ಹಾಗೂ ಇತರ ಜಿಲ್ಲೆಯ ಮೂವರು ಸೇರಿದ್ದಾರೆ.
ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ ಆಲೂರು-208, ಅರಕಲಗೂಡು-680, ಅರಸೀಕೆರೆ-989, ಬೇಲೂರು-581, ಚನ್ನರಾಯಪಟ್ಟಣ-959, ಹಾಸನ-2902 , ಹೊಳೆನರಸೀಪುರ-644,ಸಕಲೇಶಪುರ-202, ಹೊರ ಜಿಲ್ಲೆ,-49 ಮಂದಿ ಸೇರಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಈವರೆಗೆ 177ಮಂದಿ ಕೊರೊನದಿಂದ ಸಾವನ್ನಪ್ಪಿದ್ದು,ಇಂದು ಕೊರೊನದಿಂದ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!