Tuesday, August 9, 2022

Latest Posts

ಹಾಸನ ಜಿಲ್ಲೆಯಲ್ಲಿ 91 ಮಂದಿಯಲ್ಲಿ ಕೊರೋನಾ ಸೋಂಕು, ನಾಲ್ವರು ಬಲಿ 

ಹಾಸನ: ಜಿಲ್ಲೆಯಲ್ಲಿ ಕೊರೋನಾ ಹಾವಳಿ ಮುಂದುವರೆದಿದ್ದು, ಬುಧವಾರವೂ ಜಿಲ್ಲೆಯಲ್ಲಿ 91 ಕೊರೋನಾ ಪಾಸಿಟಿವ್ ಹೊಸ ಪ್ರಕರಣಗಳು ಪತ್ತೆಯಾಗಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 1933ಕ್ಕೆ ಏರಿಕೆಯಾಗಿದ್ದು, 994 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 885 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು,
27 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬುಧವಾರ ಸೋಂಕು ಪತ್ತೆಯಾದ 1933 ಸೋಂಕಿತರ ಪೈಕಿ ಹಾಸನ 23, ಅರಸೀಕೆರೆ-42, ಚನ್ನರಾಯಪಟ್ಟಣ-4, ಅರಕಲಗೂಡು-1, ಹೊಳೆನರಸೀಪುರ-10, ಸಕಲೇಶಪುರ-5, ಆಲೂರು-1, ಬೇಲೂರು-4, ಇತರ ಜಿಲ್ಲೆಯ ಒಬ್ಬರು ಸೇರಿದ್ದಾರೆ.
ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ ಚನ್ನರಾಯಪಟ್ಟಣ 367, ಆಲೂರು 85, ಅರಸೀಕೆರೆ 359, ಹಾಸನ 610, ಅರಕಲಗೂಡು 137, ಹೊಳೆನರಸೀಪುರ 186, ಸಕಲೇಶಪುರ 76, ಬೇಲೂರು101, ಹೊರ ಜಿಲ್ಲೆ-12 ಮಂದಿ ಸೇರಿದ್ದಾರೆ.
ಇಂದು ಕೂಡ ನಾಲ್ವರು ಬಲಿ 
ಜಿಲ್ಲೆಯಲ್ಲಿ ಇಂದು ಕೂಡ ಕ್ರೂರಿ ಕೊರೋನಾಗೆ ನಾಲ್ವರು ಬಲಿಯಾಗಿದ್ದು, ಮೃತರೆಲ್ಲರೂ ಹಾಸನ ತಾಲೂಕಿಗೆ ಸೇರಿದವರಾಗಿದ್ದಾರೆ.
ಬುಧವಾರ ಕೋವಿಡ್ ಗೆ ಬಲಿಯಾದವರ ಪೈಕಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 50,52,44 ವರ್ಷದ ಮಹಿಳೆಯರು ಹಾಗೂ 66 ವರ್ಷದ ಓರ್ವ ಪುರುಷ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss