Tuesday, June 28, 2022

Latest Posts

ಹಾಸನ: ಟ್ರಾಕ್ಟರ್ ಮಗುಚಿ ಯುವಕ ಸಾವು

ಹಾಸನ: ಗದ್ದೆ ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಮಗುಚಿ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಚಂದು(32) ಮೃತ ರೈತ. ಆ.19ರ ಸಂಜೆ ಗದ್ದೆ ಉಳುಮೆ ಮಾಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಟ್ರಾಕ್ಟರ್ ಬದುವಿನಂಚಿನಲ್ಲಿ ಮಗುಚಿ ಬಿದ್ದಿದೆ. ಈ ವೇಳೆ ಟ್ರಾಕ್ಟರ್ ಅಡಿಯಲ್ಲಿ ಸಿಲುಕಿದ ಯುವಕ ಕೆಸರು ಗದ್ದೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಘಟನೆ ನಡೆದಾಗ ಸ್ಥಳದಲ್ಲಿ ಯಾರು ಇರಲಿಲ್ಲ ಎನ್ನಲಾಗಿದ್ದು, ಕೊಂಚ ಸಮಯದ ಗ್ರಾಮಸ್ಥರಿಗೆ ವಿಷಯ ತಿಳಿದಿದೆ. ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss