ಹೊಸ ದಿಗಂತ ವರದಿ, ಹಾಸನ:
ನಿಮಾ೯ಣ ಹಂತದ ಕಟ್ಟಡದಿಂದ ಬಿದ್ದು ಕಾಮಿ೯ಕ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಹೊಳೆನರಸೀಪುರದಲ್ಲಿ ನಡೆದಿದೆ.
ತಾಲೂಕಿನ ಕಡುವಿನ ಹೊಸಹಳ್ಳಿಯ ರಮೇಶ(19) ಮೃತ ಯುವಕ.
ಐಟಿಐ ಓದಿಕೊಂಡಿದ್ದ ರಮೇಶ್ ಕೋವಿಡ್ ಹಿನ್ನಲೆಯಲ್ಲಿ ಕುಟುಂಬ ನಿವ೯ಹಣೆಗಾಗಿ ಕಟ್ಟಡ ಕಾಮಿ೯ಕನಾಗಿ ದುಡಿಯುತ್ತಿದ್ದ.
ಪಟ್ಟಣದ ಸೂರನಹಳ್ಳಿಯ ಸಮೀಪ ಪುರಸಭೆಯಿಂದ ಕೈಗೊಳ್ಳಲಾಗಿದ್ದ ಯುಜಿಡಿ ಪ್ಲಾಂಟ್ ಜನರೇಟರ್ ಕೊಠಡಿ ನಿಮಾ೯ಣ ಕಾಮಗಾರಿರ ವೇಳೆ ಬೀಮ್ ಕುಸಿದು ಘಟನೆ ಸಂಭವಿಸಿದೆ.
ಕಟ್ಟಡ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಸ್ಥಳೀಯರು ದೂರಿದ್ದು,ಮೃತನ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.