Monday, July 4, 2022

Latest Posts

ಹಾಸನ: ಪೊಲೀಸರಂತೆ ವೇಷ ಧರಿಸಿಕೊಂಡು ಬಂದು ದರೋಡೆ ಮಾಡಿದ ಖದೀಮರು

ಹಾಸನ: ಪೊಲೀಸರ ಸೋಗಿನಲ್ಲಿ ಬಂದ ಖದೀಮರು ಮನೆಯೊಂದರಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹೊಸೂರಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆ.17ರ ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಹೊಸೂರಿನ ನಂಜೇಗೌಡರ ಮನೆಗೆ ಇನೋವಾ ಕಾರಿನಲ್ಲಿ ಬಂದ ಯುವಕರ ತಂಡವೊಂದು, ನಾವು ಬೆಂಗಳೂರಿನ ಪೊಲೀಸರು ನಂಜೇಗೌಡರ ತಮ್ಮ ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದಾನೆ ಎಂದು ಮನೆಯವರಿಗೆ ಪೊಲೀಸರ ಶೈಲಿಯಲ್ಲಿ ಅವಾಜ್ ಹಾಕಿ ಹೆದರಿಸಿ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಮನೆಯಲ್ಲಿದ್ದ 25 ಗ್ರಾಂ ಚಿನ್ನಾಭರಣ ಹಾಗೂ ಸ್ಪಲ್ಪ ಪ್ರಮಾಣದ ನಗದನ್ನು ಮನೆಯವರ ಎದುರೇ ದೋಚಿರುವ ಖದೀಮರು, ನಾಳೆ ಚನ್ನರಾಯಪಟ್ಟಣ ಠಾಣೆಗೆ ಬನ್ನಿ ಎಂದು ಮನೆಯವರ ಎದುರೇ ಚಿನ್ನಾಭರಣ ದೋಚಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕೂಡಲೇ ತಮ್ಮನಿಗೆ ಕರೆ ಮಾಡಿದ ನಂಜೇಗೌಡ ಘಟನೆ ಬಗ್ಗೆ ವಿಚಾರಿಸಿದ ಅಸಲಿಯತ್ತು ಬಯಲಾಗಿದೆ. ಮನೆಗೆ ಬಂದವರು ಅಸಲಿ ಪೊಲೀಸರಲ್ಲ ನಕಲಿ ಎಂದು ತಿಳಿದಾಕ್ಷಣ ತಾವು ಮೋಸ ಹೋಗಿರುವ ಸಂಗತಿ ಅರಿತ ನಂಜೇಗೌಡ ಪ್ರಕರಣ ಸಂಬಂಧ ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss