spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, September 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಾಸನ: ಸಬ್ ಇನ್ಸ್ಪೆಕ್ಟರ್ ನೇಣಿಗೆ ಶರಣು

- Advertisement -Nitte

ಹಾಸನ: ಸಬ್ ಇನ್ಸ್ಪೆಕ್ಟರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಲ್ಲಿ ನಡೆದಿದೆ.
ಚನ್ನರಾಯಪಟ್ಟಣ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಆತ್ಮಹತ್ಯೆಗೆ ಶರಣಾದವರು.
ಗುರುವಾರವಷ್ಟೆ ನಗರದ ಕೊಲೆ ಪ್ರಕರಣ ಭೇದಿಸಿದ್ದ ಪಿಎಸ್ಐ ಕಿರಣ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗುರುವಾರ ಕತ೯ವ್ಯ ನಿವ೯ಹಿಸಿ ಎಂದಿನಂತೆ ತೆರಳಿದ್ದ ಕಿರಣ್ ಕುಮಾರ್ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆದರಿ ದುಡುಕಿದರ ಕಿರಣ್: ಕಿರಣ್ ಕಾಯ೯ಕ್ಷೇತ್ರ ವ್ಯಾಪ್ತಿಯ ಚನ್ನರಾಯಪಟ್ಟಣ ಬಾಗೂರು ರಸ್ತೆಯಲ್ಲಿ ಗುರುವಾರ ಕ್ಷುಲ್ಲಕ ವಿಚಾರಕ್ಕೆ ಮುಸ್ಲಿಂ ಯುವಕನೊಬ್ಬನ ಕೊಲೆ ನಡೆದಿತ್ತು.
ಈ ಸಂಬಂಧ ಚನ್ನರಾಯಪಟ್ಟಣಕ್ಕೆ ಶುಕ್ರವಾರ ಐಜಿ ಹಾಗೂ ಎಸ್ಪಿ ಭೇಟಿ ನೀಡುವವರಿದ್ದರು ಎಂದೇಳಲಾಗಿದ್ದು, ಈ ವಿಚಾರಕ್ಕೆ ಹೆದರಿ ಕಿರಣ್ ದುಡುಕಿನ ನಿಧಾ೯ರ ತೆಗೆದುಕೊಂಡಿರಬಹುದು ಎಂಬ ಮಾತುಗಳು ಇಲಾಖಾ ವಲಯದಲ್ಲಿ ಕೇಳಿ ಬರುತ್ತಿದೆ.
ಪಿಎಸ್ಐ ಸೂಸೈಡ್ ನಿಂದ ಪೊಲೀಸ್ ವಲಯದಲ್ಲಿ ದಿಗ್ಭ್ರಮೆ ಮೂಡಿದ್ದು,ಆತ್ಮಹತ್ಯೆ ಯ ನಿಖರ ಕಾರಣ ತನಿಖೆಯಿಂದಷ್ಟೇ ಹೊರಬರಬೇಕಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss