Monday, August 8, 2022

Latest Posts

ಹಾಸನ: ಹೊಳೆ ಮಲ್ಲೇಶ್ವರ ದೇಗುಲ ಪ್ರವೇಶಿಸಿದ ಹೇಮೆಯ ನೀರು.

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು,ಸಕಲೇಶಪುರದ ಹೊಳೆ ಮಲ್ಲೇಶ್ವರ ದೇಗುಲಕ್ಕೆ ಹೇಮೆಯ ನೀರು ಪ್ರವೇಶವಾಗಿದೆ.

ಮೂಡಿಗೆರೆಯಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಹೇಮಾವತಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು,ನದಿ ತೀರದ ಪ್ರದೇಶಗಳು ಜಲಾವೃತವಾಗೋ ಆತಂಕ ಸೃಷ್ಟಿಯಾಗಿದೆ.

ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರೊ ಮಳೆಗೆ ಬೆಚ್ಚಿರೋ ಜನತೆ ಕಳೆದ ಬಾರಿಯಂತೆ ಪ್ರವಾಹ ಪರಿಸ್ಥಿತಿ ಎದುರಾಗೋ ಭೀತಿ ಆವರಿಸಿದೆ.

ಮತ್ತೊಂದೆಡೆ ಜಿಲ್ಲೆಯಾದ್ಯಂತ ಅಬ್ಬರಿಸುತ್ತಿದ್ದು,ಬೇಲೂರು ತಾಲೂಕಿನಲ್ಲಿ ಕೆರೆ ಕಟ್ಟೆಗಳು ತುಂಬುತ್ತಿವೆ.
ಇತಿಹಾಸ ಪ್ರಸಿದ್ಧ ವಿಷ್ಣು ಸಮುದ್ರ ಕೆರೆ, ಅಗಸರಹಳ್ಳಿ ಕೆರೆ ಭರ್ತಿಯಾಗಿದ್ದು,ಕೋಡಿ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ.
ಘಟನೆಯಿಂದಾಗಿ ಸುಮಾರು 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಅಗಸರಹಳ್ಳಿ ಕೂಡ್ಲೂರು ರಸ್ತೆ ಸಂಪರ್ಕ ಕಡಿತಗೊಂಡಿದ್ದು,ಹತ್ತಾರು ಹಳ್ಳಿಗಳ ಜನರ ಪರದಾಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss