Wednesday, July 6, 2022

Latest Posts

ಹಾಸನ| 300ಕ್ಕೆ ಬಂದು ನಿಂತ ಕೊರೋನಾ ಬಾಧಿತರ ಸಂಖ್ಯೆ

ಹಾಸನ: ಜಿಲ್ಲೆಯಲ್ಲಿಂದು ಹೊಸದಾಗಿ ಒಂದು ಕೋವಿಡ್-19 ಪ್ರಕರಣ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ ಒಟ್ಟಾರೆ ಕೋವಿಡ್-19 ಸೋಂಕಿತರ ಸಂಖ್ಯೆ 300 ಕ್ಕೆ ಏರಿಕೆಯಾಗಿದೆ ಹಾಗೂ ಆಸ್ಪತ್ರೆಯಿಂದ 224 ಮಂದಿ ಬಿಡುಗಡೆಯಾಗಿದ್ದು, 74 ಮಂದಿ ಸಕ್ರೀಯ ಸೋಂಕಿತರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಪತ್ತೆಯಾದ ಪ್ರಕರಣ ಅರಸೀಕೆರೆ ತಾಲ್ಲೂಕಿಗೆ ಸೇರಿದ್ದಾಗಿದೆ. ಅವರು ಬಿ.ಎಂ.ಟಿ.ಸಿ. ಬಸ್ ಚಾಲಕರಾಗಿದ್ದು, ಜ್ವರ ಬಂದ ಹಿನ್ನಲೆಯಲ್ಲಿ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 21 ಕಂಟೈನ್‍ಮೆಂಟ್ ವಲಯಗಳಿದ್ದು, ನೆನ್ನೆ ಹಾಗೂ ಇಂದು ಮೂರು ಗ್ರಾಮಗಳು ಸೇರ್ಪಡೆಯಾಗಿವೆ. ಹಾಸನ ನಗರದ ಕೆ.ಆರ್. ಪುರಂನ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಿದ 24 ಗಂಟೆಗಳ ನಂತರ ಬಳಕೆಗೆ ಅವಕಾಶ ನೀಡಲಾಗಿದೆ ಹಾಗೂ 28 ದಿನಗಳ ಅವಧಿ ಪೂರ್ಣಗೊಳಿಸಿದ 2 ಕಂಟೈನ್‍ಮೆಂಟ್ ವಲಯಗಳನ್ನು ಪಟ್ಟಿಯಿಂದ ತೆರವುಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss