Sunday, July 3, 2022

Latest Posts

ಹಾಸಿಗೆಯಿಲ್ಲ, ದಿಂಬಿಲ್ಲ ಎಂಬುದನ್ನು ಬಿಟ್ಟು ಕೋವಿಡ್ ಆಸ್ಪತ್ರೆ ಆರಂಭಿಸಿ, ಜನರ ನೆರವಿಗೆ ಬನ್ನಿ ಸಿದ್ದರಾಮಯ್ಯಗೆ ಮಾಜಿ ಸಚಿವ ಎಚ್.ವಿಶ್ವನಾಥ್ ಟಾಂಗ್

ಮೈಸೂರು: ಕೋವಿಡ್ ಕಿಟ್ ಖರೀದಿಯ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಲೆಕ್ಕ ಕೇಳುವುದನ್ನು ಬಿಟ್ಟು, ಕಾಂಗ್ರೆಸ್ ಪಕ್ಷದಿಂದ ಕೋವಿಡ್ ಆಸ್ಪತ್ರೆಯನ್ನು ಆರಂಭಿಸುವ ಮೂಲಕ ಸಂಕಷ್ಟದಲ್ಲಿರುವ ಜನರ ನೆರವಿಗೆ ಬನ್ನಿ ಎಂದು ಬಿಜೆಪಿಯ ಮುಖಂಡರಾದ ಮಾಜಿ ಸಚಿವ ಎಚ್.ವಿಶ್ವನಾಥ್ ಟಾಂಗ್ ನೀಡಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸಂಕಷ್ಟದಲ್ಲಿರುವ ಜನರ ರಕ್ಷಣೆ ಮಾಡುವುದು ಸರ್ಕಾರದ ಆದ್ಯತೆ ಮತ್ತು ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ಖರೀದಿಯ ವೆಚ್ಚದ ಬಗ್ಗೆ ಲೆಕ್ಕ ಕೇಳುವುದು ಸರಿಯಲ್ಲ, ಲೆಕ್ಕ ಎಲ್ಲಿಯೂ ಹೋಗುವುದಿಲ್ಲ, ಕೊಡುತ್ತಾರೆ, ಆದರೆ ವಿಪಕ್ಷ ನಾಯಕರಾಗಿ ನೀವು ಸರ್ಕಾರಕ್ಕೆ ಸಹಕಾರ ನೀಡಬೇಕು, ಆದರೆ ನಿಮಗೆ ಸಹಕಾರ ಪಡೆದುಕೊಳ್ಳುವುದು ಗೊತ್ತೆ ವಿನಹ ಬೇರೆಯವರಿಗೆ ಸಹಕಾರ ನೀಡುವುದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹಾಮಾರಿ ಕೊರೋನಾ ವೈರಸ್ ಜನರನ್ನು ತೀವ್ರವಾಗಿ ಭಾದಿಸುತ್ತಿರುವಾಗ ಆಡಳಿತ ಹಾಗೂ ವಿಪಕ್ಷ ಸೇರಿ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಮೊದಲು ನೀವು ಜವಾಬ್ದಾರಿ ವರ್ತಿಸುವುದನ್ನು ಕಲಿಯಿರಿ ಎಂದರು.
ನಮ್ಮನ್ನು ಪಕ್ಷಾಂತರಿಗಳು ಎನ್ನುವ ಸಿದ್ದರಾಮಯ್ಯ ನಾಲ್ಕು ಬಾರಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ೧೦ ಬಾರಿ ಪಕ್ಷಾಂತರ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದರು ಎಂದು ಲೇವಡಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss