Saturday, August 13, 2022

Latest Posts

ಹಾಸಿಗೆ, ದಿಂಬು, ಸೊಳ್ಳೆಬತ್ತಿ… ಸಂಸತ್‌ ಭವನದ ಬಳಿ ಎಂಟು ಮಂದಿ ಸಂಸದರ ಅಹೋರಾತ್ರಿ ಧರಣಿ!!

ನವದೆಹಲಿ: ಹಾಸಿಗೆ, ದಿಂಬು, ಸೊಳ್ಳೆಬತ್ತಿ… ದೇಶಭಕ್ತಿ ಗೀತೆ… ರೈತ ಪರ ಘೋಷಣೆ… ಕೈಯಲ್ಲಿ ಫಲಕ…
ಇದು ಸಂಸತ್‌ ಭವನದ ಬಳಿ ಸೋಮವಾರ ರಾತ್ರಿ ಕಂಡ ದೃಶ್ಯ!
ಕೃಷಿ ಮಸೂದೆ ಮಂಡನೆ ವಿಚಾರ ಸಂದರ್ಭ ನಡೆಯುತ್ತಿದ್ದ ರಾಜ್ಯಸಭೆ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಕಾರಣ ಒಂದು ವಾರಗಳ ಕಾಲ ಕಲಾಪದಿಂದ ಅಮಾನತುಗೊಂಡಿರುವ ಎಂಟು ಮಂದಿ ಸಂಸದರು ಸೋಮವಾರ ಸಂಸತ್‌ ಭವನದ ಬಳಿ ಆಹೋರಾತ್ರಿ ಧರಣಿ ನಡೆಸಿ, ತಮ್ಮ ಅಮಾನತನ್ನು ವಿರೋಧಿಸಿದ್ದಾರೆ.
ಧರಣಿಗೆ ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ಎಚ್‌.ಡಿ ದೇವೇಗೌಡ, ಜಯಾ ಬಚ್ಚನ್‌ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.ಪ್ರತಿಪಕ್ಷದ ಹಿರಿಯ ನಾಯಕರಾದ ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಫಾರೂಖ್ ಅಬ್ದುಲ್ಲಾ, ಜೆಡಿಎಸ್‌ನ ಎಚ್‌.ಡಿ ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದರು. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ಪ್ರತಿಭಟನೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಭಾಗವಹಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಆಂಬ್ಯುಲೆನ್ಸ್ ಒಂದನ್ನು ಸ್ಥಳದಲ್ಲೇ ನಿಯೋಜಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss