ಹಾಸ್ಟಲ್ ವಾರ್ಡ್‌ನಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ!

0
37

ಮೈಸೂರು: ಹಾಸ್ಟಲ್ ವಾರ್ಡ್‌ರೊಬ್ಬರಿಗೆ ನೀಡಲಾಗಿದ್ದ ಕಾರಣ ಕೇಳಿ ನೋಟಿಸ್‌ನ್ನು ಹಿಂತೆಗೆದುಕೊಳ್ಳುವುದಕ್ಕಾಗಿ ಒಂದು ಲಕ್ಷ ಹಣವನ್ನು ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರೊಬ್ಬರು ಭ್ರಷ್ಟಾಚಾರ ನಿಗ್ರಹದಳದ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿವಣ್ಣ ಎಂಬಾತನೇ ಲಂಚ ಪಡೆದು, ಪೊಲೀಸರಿಂದ ಬಂಧಿತನಾದವ. ಈತ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ರಾವಂದೂರಿನ ಹಾಸ್ಟೇಲ್ ವಾರ್ಡನ್ ಹೆಚ್.ರಾಜಯ್ಯ ಎಂಬವರಿಗೆ ನೀಡಲಾಗಿದ್ದ ಕಾರಣ ಕೇಳಿ ನೋಟಿಸ್ ವಾಪಸ್ ಪಡೆಯಲು ಹಾಗೂ ಹಾಸ್ಟೇಲ್‌ನ್ನು ತಪಾಸಣೆ ನಡೆಸದಿರಲು ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರನ್ನು ಒಪ್ಪಿಸುವುದಾಗಿ ಹೇಳಿ, ೧.೫ಲಕ್ಷರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಮೊದಲೇ ೫೦ಸಾವಿರ ರೂ.ಹಣವನ್ನು ರಾಜಯ್ಯ ನೀಡಿದ್ದು, ನಂತರ ಮುನಿರಾಜು ಹಾಗೂ ಶಿವಣ್ಣ ವಿರುದ್ಧ ಎಸಿಬಿ ದೂರು ನೀಡಿದ್ದರು. ಉಳಿದ ೧ಲಕ್ಷ ಹಣವನ್ನು ಪಡುವಾರಹಳ್ಳಿ ವೃತ್ತದಲ್ಲಿ ತೆಗೆದುಕೊಳ್ಳುವಾಗ ಪೊಲೀಸರು ಶಿವಣ್ಣನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಸಿಬಿ ಎಸ್ ಪಿ ರಶ್ಮಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪರಶುರಾಮ್ ಹಾಗೂ ಇನ್ಸಪೆಕ್ಟರ್ ನಿರಂಜನ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here