ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಾಸ್ಯ ನಟನಿಂದ ಹೀರೋ ಆಗಿ ಬಡ್ತಿ ಪಡೆದ ಚಿಕ್ಕಣ್ಣ

ಬೆಂಗಳೂರು: ಬೆಂಗಳೂರು:ಇತ್ತೀಚೆಗೆ ಹಾಸ್ಯ ನಟರು ಹೀರೋ ಆಗುವುದು ಸಾಮಾನ್ಯ. ಅಂತಹ ಉದಾಹರಣೆಗಳು ಸಾಕಷ್ಟಿದೆ.  ಕನ್ನಡದಲ್ಲಿ ಕೋಮಲ್ ,ಶರಣ್  ಅವರಿಬ್ಬರು ವೃತ್ತಿ ಜೀವನ ಆರಂಭಿಸಿದರೂ ಇಂದು ಹೀರೋಗಳು ಎನಿಸಿಕೊಂಡಿದ್ದಾರೆ. ಇದೀಗ ಆ ಸಾಲಿಗೆ ಹಾಸ್ಯ ನಟ ಚಿಕ್ಕಣ್ಣ ಸೇರಿದ್ದಾರೆ. ಸದ್ಯ ಬಹುಬೇಡಿಕೆಯ ಹಾಸ್ಯ ನಟ ಆಗಿರುವ ಚಿಕ್ಕಣ್ಣ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ದಾರೆ.

ಹೌದು ಹಾಸ್ಯ ನಟ ಚಿಕ್ಕಣ್ಣ ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಹೊರಮ್ಮುತ್ತಿದ್ದಾರೆ.  ಆ ಚಿತ್ರದ ಶೀರ್ಷಿಕೆ ಇದೇ ತಿಂಗಳು 19 ರಂದು ಬಿಡುಗಡೆ ಮಾಡಲಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರಕ್ಕೆ ಉಪಾಧ್ಯಕ್ಷ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಬಾಂಬೆ ಮಿಠಾಯಿ, ಡಬ್ಬಲ್ ಎಂಜಿನ್ ಖ್ಯಾತಿಯ ಚಂದ್ರ ಮೋಹನ್  ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಕ್ಕೂ ಉಮಾಪತಿ ಶ್ರೀನಿವಾಸ್  ನಿರ್ಮಿಸಿದ್ದಾರೆ.

ರವಿಶಂಕರ್ , ರಾಕ್ ಲೈನ್ ಸುಧಾಕರ್  ಸೇರಿದಂತೆ ಅನೇಕ ಕಲಾವಿದರು ಇದ್ದಾರೆ. ಈ ಚಿತ್ರದ ಮೂಲಕ ಹೊಸ ನಾಯಕಿಯನ್ನು ಪರಿಚಯಿಸಲಾಗುತ್ತಿದೆಯಂತೆ.ಅರ್ಜುನ್  ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss