ಧಾರವಾಡ: ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಿಯಾದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮುಚ್ಚುವಂತೆ ಆಗ್ರಹಿಸಿ ಮುಚ್ಚುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಹಿಂದಿ ಪ್ರಚಾರ ಸಭಾ ಎದುರಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿ, ಹಿಂದಿ ಪ್ರಚಾರ ಸಭಾ ಕಚೇರಿ ಬಂದು ಕೆಲಕಾಲ ಪ್ರತಿಭಟಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ ವಹಿಸಿದ್ದ ಕನಸೇ ಜಿಲ್ಲಾಧಕ್ಷ ಗರೀಶ್ ಪೂಜಾರ, ೨೭೦೦ ವರ್ಷ ಇತಿಹಾಸ ಹೊಂದರುವ ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿ ಬಂದಿವೆ. ಈ ಭಾಷೆಯು ವಿಶ್ವ ಲಿಪಿಗಳ ರಾಣಿ. ಆದರೆ, ಕನ್ನಡ ಭಾಷಾ ಬೆಳವಣಿಗೆಗೆ ಹಿಂದಿ ಭಾಷೆ ಅಡ್ಡಿಯಾಗಿದೆ ಎಂದು ದೂರಿದರು.
ಕೇವಲ ೨೦೦ ವರ್ಷಗಳ ಇತಿಹಾಸ ಹೊಂದಿರುವ ಹಿಂದಿ ಭಾಷೆ ರಾಷ್ಟ್ರ ಭಾಷೆಯ ಹೆಸರಲ್ಲಿ ಮೆರೆಸುವ ಕೇಂದ್ರ ಸರ್ಕಾರ ಧೋರಣೆಗೆ ಖಂಡನೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಭಾರತದ ಸಂವಿಧಾನ ಒಪ್ಪಿದ ಎಲ್ಲ ೧೪ ಭಾಷೆ ಸಮಾನವಾಗಿ ಕಾಣದೆ, ಕೇವಲ ಹಿಂದಿ ಭಾಷಾ ಬೆಳವಣಿಗೆಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುವುದು ನಾಚಿಗೇಡು ಎಂದು ಕಿಡಿ ಕಾರಿದರು.
ಹಿಂದಿಗಿಂತಲೂ ತಮಿಳು, ಕನ್ನಡ, ತಲಗು ಭಾಷೆಗಳು ಪ್ರಾಚೀನತೆಯಲ್ಲಿ ಮುಂದಿವೆ. ಉತ್ತರ ಭಾರತೀಯರ ಗ್ರಾಮ ಭಾಷೆಯಾದ ಹಿಂದೆ ಆ ಭಾಗದಿಂದ ಆಯ್ಕೆ ಸಂಸದರು ಹೆಚ್ಚು ಬಳಸುವುದರಿಂದ ಕೇಂದ್ರ ಸರ್ಕಾರ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬೆಳಸುತ್ತಿದೆ ಎಂದರು.
ಈಗ ಹಿಂದೆ ಸಂಪರ್ಕ ಭಾಷೆಯಾಗದೆ, ರಾಷ್ಟ್ರೀಯ ಭಾಷೆ ಹೆಸರಲ್ಲಿ ಎಲ್ಲ ಭಾಷೆಗಳ ಮೇಲೆ ಸವಾರಿ ಮಾಡುತ್ತಿದೆ. ಇದು ದೇಶದ ಪ್ರಾದೇಶಿಕ ಭಾಷೆಗಳಿಗೆ ಮಾರಕ. ಕೇಂದ್ರ ಸರ್ಕಾರ ಒತ್ತಾಯ ಪೂರಕ ಹಿಂದಿ ಹೇರಲು ಸಭಾ ಮೂಲಕ ಕೋಟ್ಯಂತರ ಹಣ ವ್ಯಯಿಸುತ್ತಿದೆ ಎಂದು ಆರಾಒಪಿದಿದರು.
ಕೂಡಲೇ ರಾಜ್ಯ ಸರ್ಕಾರ ಧಾರವಾಡದ ಹಿಂದಿ ಪ್ರಚಾರ ಸಭಾ ಮುಚ್ಚಬೇಕು. ಹಿಂದಿ ದಿನ ಆಚರಣೆ ಬದಲಿಗೆ ಕನ್ನಡ ಭಾಷಾ ದಿನ ಆಚರಿಸಬೇಕು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.