Thursday, July 7, 2022

Latest Posts

ಹಿಂದುತ್ವದ ಹೆಸರಿನಲ್ಲಿ ಜಾತಿಗಳ ವರ್ಗೀಕರಣ ಕೈಬಿಟ್ಟರೆ ಮಾತ್ರ ಸಮಾನತೆ ಸಾಧ್ಯ: ಡಾ.ಜಿ.ಪರಮೇಶ್ವರ್

ಹೊಸ ದಿಗಂತ ವರದಿ, ಕೋಲಾರ:

ಹಿಂದುತ್ವದ ಹೆಸರಿನಲ್ಲಿ ಜಾತಿಗಳನ್ನು ವರ್ಗೀಕರಣ ಮಾಡುವುದನ್ನು ಬಿಟ್ಟರೆ ಮಾತ್ರ ಜಾತಿ ವ್ಯವಸ್ಥೆ ನಾಶವಾಗಿ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ವೇಮಗಲ್ ನಲ್ಲಿ  ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ  ಮಾತನಾಡಿದ ಅವರು ಹಿಂದು ನಾವು ಎಲ್ಲಾ ಒಂದು ಎಂದುಕೊಂಡೆ ಆಧುನಿಕತೆ ಬೆಳೆದಂತೆಲ್ಲಾ ಶೂದ್ರ ಸಮುದಾಯದವರು ಎಂದು ಅಗೌರವ ಅಪಮಾನಗಳನ್ನು ಮಧ್ಯೆ ಬದುಕುವಂತಾಗಿದೆ ಸಂವಿಧಾನದ ಚೌಕಟ್ಟಿನಲ್ಲಿ ನಿರಾಸೆ ನೋವಿನಲ್ಲಿ  ಬದುಕುವಂತಾಗಿದೆ ಎಂದರು.
ಮನುಷ್ಯ ನೆಮ್ಮದಿಯ ಬದುಕು ಸಾಗಿಸಲು ಆಧ್ಯಾತ್ಮಿಕ ಹಾಗೂ ಭಕ್ತಿ ಭಾವ ಬಹಳ ಅವಶ್ಯಕ. ಹೀಗಾಗಿ ಪ್ರತಿ ಗ್ರಾಮಗಳಲ್ಲಿ ಇಂತಹ ದೇವಾಲಯಗಳು ಅಗತ್ಯವಿದೆ ಎಂದ ಅವರು, ಮನಸ್ಸು ಶುದ್ಧಿ ಆಗಬೇಕಾದರೆ ಭಕ್ತಿ ಭಾವ ಬಹಳ ಮುಖ್ಯ ಹಾಗಾಗಿ  ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿದ್ದಾರೆ ದೇವರ ಹೆಸರಿನಲ್ಲಿ ತಪ್ಪು ಮಾಡುವುದು ಬಹಳ ಕಡಿಮೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್‌ಸುದರ್ಶನ್, ಗುಡಿ,ಚರ್ಚ್ ಮಸೀದಿಗಳಲ್ಲಿ ಪ್ರಾರ್ಥನೆ ಇಲ್ಲದೇ ಹೋಗಿದ್ದರೆ ಮನುಷ್ಯರು ಹುಚ್ಚರಾಗುತ್ತಾ ಇದ್ದರು. ಇಡೀ ಜಗತ್ತಿನಲ್ಲಿ ದೇವರ ಮೇಲಿನ ಭಕ್ತಿ ಮಾನವನ ಏಳಿಗೆಗೆ ಸಾಧ್ಯ ವೈವಿಧ್ಯತೆಯಲ್ಲಿ ಏಕತೆ ಕಾಣಲು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ದೇವಾಲಯಗಳು ಮುಖ್ಯವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ  ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಬೈರಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಬಿ.ಉದಯ್ ಶಂಕರ್, ದೇವಾಲಯದ ಧರ್ಮದರ್ಶಿಗಳು ಪಿ.ವೆಂಕಟೇಶ್,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ನಾಗರಾಜ್, ಶಶಿಕಲಾ ನಾಗೇಶ್, ಸೀತಿಹೊಸೂರು ಮುರಳಿಗೌಡ,  ಸದಸ್ಯರಾದ ರಮೇಶ್,ಹಾಗೂ ಊರಿನ ಹಲವಾರು ಗಣ್ಯರು, ಮುಖಂಡರುಗಳು ಹಿರಿಯರು ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss