Monday, July 4, 2022

Latest Posts

ಹಿಂದುತ್ವವೆಂದರೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ: ಪಟ್ಟಾಭಿರಾಮ್

ಹೊಸ ದಿಗಂತ ವರದಿ, ದಾವಣಗೆರೆ:

ದಾವಣಗೆರೆ ಸಮೀಪದ ಹರಿಹರದಲ್ಲಿ ಹರಿಹರೇಶ್ವರರ ದೇವಾಲಯವಿದ್ದು, ಅಲ್ಲಿ ಹರಿ-ಹರರು ಒಂದಾಗಿದ್ದಾರೆ. ಹಿಂದುತ್ವವೆಂದರೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ. ಇಲ್ಲಿ ವಿಭಜನೆಯಾಗಲು ಅವಕಾಶವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ್ಯ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶುಕ್ರವಾರ ಎಸ್.ಎ.ರವೀಂದ್ರನಾಥ್ ಅಮೃತ ಮಹೋತ್ಸವ ಮಕ್ಕಳ ಕ್ರೀಡಾಂಗಣದ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸಲಾಗಿರುವ ಧ್ಯಾನಸ್ಥ ಶಿವನ ಪುತ್ಥಳಿ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಎಂಬುದು ನಮ್ಮ ದೇಶದ ಬೆನ್ನು ಮೂಳೆ, ಬೇರೆಯವರಿಗೆ ಒಳಿತನ್ನು ಮಾಡುವುದೇ ಧರ್ಮ. ಕೆಡುಕನ್ನು ಮಾಡುವುದೇ ಅಧರ್ಮ. ಪಾಪ-ಪುಣ್ಯ, ಪರೋಪಕಾರ ಕಲ್ಪನೆಗಳೇ ನಮ್ಮ ಹಿಂದೂ ಧರ್ಮದ ತಳಹದಿ. ಜನರಿಗೆ ಪಾಪ-ಪುಣ್ಯ, ಧರ್ಮ-ಅಧರ್ಮಗಳ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ಕೆಲಸ ಇನ್ನಷ್ಟು ಹೆಚ್ಚಾಗಬೇಕು ಎಂದು ಅವರು ಆಶಿಸಿದರು.
ಇಂದು ನರೇಂದ್ರ ಮೋದಿಯವರು ಪ್ರಧಾನಿಗಳಾಗಿರಬಹುದು. ಆದರೆ ಅವರು ಪ್ರಧಾನಿಯಾಗುವುದರ ಹಿಂದೆ 60-70 ವರ್ಷಗಳ ಕಾಲದ ಕಾರ್ಯಕರ್ತರ ಶ್ರಮ, ಬಲಿದಾನವಿದೆ. ಚುನಾವಣೆಯಲ್ಲಿ ಠೇವಣಿ ಉಳಿದಿರುವುದನ್ನೇ ಸಂಭ್ರಮಿಸುವಂತಹ ಕಾಲವೊಂದಿತ್ತು. ಪಂಚಾಯಿತಿ ಚುನಾವಣೆಯಲ್ಲಿ ಕೂಡ ಗೆಲ್ಲಲು ಸಾಧ್ಯವಿಲ್ಲದಿದ್ದರೂ, ಪಕ್ಷದ ಬಾವುಟ ಹಿಡಿದು, ಸಂಘಟನೆ ಮಾಡಿದ ಕಾರ್ಯಕರ್ತರಿಂದಾಗಿ ಇಂದು ಬಿಜೆಪಿ ಬೆಳೆದಿದೆ. ನೆಹರು ಮತ್ತು ಇಂದಿರಾ ಕಾಲದಲ್ಲಿ ಇದ್ದಂತಹ ಬಲಿಷ್ಠವಾದ ಕಾಂಗ್ರೆಸ್ ಪಕ್ಷವನ್ನು ಎದುರಿಸಿ ಪಕ್ಷ ಕಟ್ಟಿದ್ದ ಸಾಮಾನ್ಯದ ಮಾತಾಗಿರಲಿಲ್ಲ. ಎಲ್ಲರಿಗೂ ಅಧಿಕಾರ ಭಾಗ್ಯ ಸಿಗುವುದಿಲ್ಲ. ಅಧಿಕಾರ ಸಿಗದ ಕಾರ್ಯಕರ್ತರನ್ನು ಕೂಡ ಸದಾ ಗೌರವಿಸಬೇಕೆಂದು ಪಟ್ಟಾಭಿರಾಮ್ ಕರೆ ನೀಡಿದರು.
ಒಂದು ಪ್ರದೇಶದ ಬದುಕು ಸುಸಂಸ್ಕೃತ ಎನ್ನಿಸಿಕೊಳ್ಳಬೇಕಾದರೆ ಅಲ್ಲಿನ ಪ್ರeವಂತ ಪ್ರಜೆಗಳು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಒಳಿತಿಗಾಗಿ ದುಡಿಯಬೇಕಾಗುತ್ತದೆ. ರಾಜಕೀಯ, ಸಮಾಜಸೇವೆ, ಶಿಕ್ಷಣ ಯಾವುದೇ ಕ್ಷೇತ್ರವಾದರೂ ಪ್ರತಿಯೊಬ್ಬರೂ ತಮ್ಮ ಸೇವೆಯನ್ನು ಸಮಾಜಕ್ಕಾಗಿ ಅರ್ಪಿಸಬೇಕಾಗುತ್ತದೆ. ದೀರ್ಘಕಾಲ ನೆನಪಲ್ಲಿ ಉಳಿಯುವ, ಸಮಾಜ ಹೆಮ್ಮೆಪಡುವಂತಹ ಸತ್ಕಾರ್ಯಗಳು ವಿದ್ಯಾಸಂಸ್ಥೆಗಳಿಂದ ಆಗಬೇಕು. ಅಂತಹ ಸಾಲಿನಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯವು ತನ್ನ ವಿಶಿಷ್ಠವಾದ ಶಿಕ್ಷಣ ಸೇವೆಗಾಗಿ ಸಮಾಜದಲ್ಲಿ ಹೆಸರು ಗಳಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಿ.ಎಂ.ಸಿದ್ಧೇಶ್ವರ್ ಮಾತನಾಡಿ, ಮಾಜಿ ಸಚಿವರು ಮತ್ತು ದಾವಣಗೆರೆ ಉತ್ತರ ಶಾಸಕರಾದ ಎಸ್.ಎ.ರವೀಂದ್ರನಾಥ್‌ರವರು ರಾಜಕೀಯವಾಗಿ ಅಧಿಕಾರದ ಉತ್ತುಂಗಕ್ಕೆ ಏರಿದ್ದರೂ ಸಹ ಜನರೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ೫ ಬಾರಿ ಶಾಸಕರಾಗಿ, ೭ ವರ್ಷ ಕರ್ನಾಟಕ ಸರ್ಕಾರದ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಸಹ ಇಂದಿಗೂ ರವೀಂದ್ರನಾಥ್ ತಮ್ಮ ಗ್ರಾಮೀಣ ಸೊಗಡಿನ ವ್ಯಕ್ತಿತ್ವವನ್ನು ಬಿಟ್ಟಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ಅವರನ್ನು ಅಭಿನಂದಿಸಲಾಯಿತು. ಕ್ರೀಡಾಂಗಣದ ಆವರಣದಲ್ಲಿರುವ ಭಾರತಮಾತೆಯ ಭಾವಚಿತ್ರವನ್ನು ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ.ಎ.ಹೆಚ್.ಶಿವಂiಗಿಸ್ವಾಮಿ ಉದ್ಘಾಟಿಸಿದರು. ಎಸ್.ಎ.ರವೀಂದ್ರನಾಥ್ ಬದುಕಿನ ಪ್ರಮುಖ ಘಟನೆಗಳನ್ನು ದಾಖಲಿಸಿರುವ ಪುಸ್ತಕದ ಮುಖಪುಟವನ್ನು ಬಿಜೆಪಿ ಮಾಜಿ ಜಿಧ್ಯಕ್ಷ ಯಶವಂತರಾವ್ ಜಾಧವ್ ಬಿಡುಗಡೆಗೊಳಿಸಿದರು. ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಸೋಮೇಶ್ವರ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಆರ್.ಅಶೋಕ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಲಪ್ರತಿಭೆ ಕೆ.ಎಸ್.ರಮ್ಯಾ ಅವರು ಎಸ್.ಎ.ರವೀಂದ್ರನಾಥ್ ಕುರಿತು ಅಭಿನಂದನಾ ನುಡಿಗಳ ಮೂಲಕ ಗೌರವ ಸಮರ್ಪಿಸಿದರು. ವಿದ್ಯಾಲಯದ ಶಿಕ್ಷಕಿಯರಾದ ಬಿ.ಹೇಮಾ, ಎಂ.ರೇಖಾ ಶಿವಸ್ತುತಿಯ ಮೂಲಕ ಪ್ರಾರ್ಥನೆ ನೆರವೇರಿಸಿದರು. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್, ಸದಸ್ಯರಾದ ಕೆ.ಎಂ.ವೀರೇಶ್, ಪ್ರಸನ್ನ ಕುಮಾರ್, ಬಿಜೆಪಿ ಜಿ ಎಸ್ಸಿ ಮೋರ್ಚಾ ಅಧ್ಯಕ್ಷ ಎನ್.ಹನುಮಂತನಾಯ್ಕ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯಶಿಕ್ಷಕಿ ಎನ್.ಪ್ರಭಾವತಿ, ಪಿ.ಹೆಚ್.ವೀಣಾ, ಡಿಡಿಪಿಐ ಪರಮೇಶ್ವರಪ್ಪ, ಬಿಇಓ ಸಿದ್ಧಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss