Thursday, July 7, 2022

Latest Posts

ಹಿಂದುಸ್ಥಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವುದು ನನಗೆ ಹೆಮ್ಮೆಯ ವಿಷಯ: ಗುಲಾಂ ನಬಿ ಆಜಾದ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಾನು ಇದುವರೆಗೆ ಪಾಕಿಸ್ತಾನವನ್ನು ಕಂಡಿಲ್ಲ, ಅಲ್ಲಿಗೆ ಹೋಗಲಿಲ್ಲ. ಇದು ನನ್ನ ಜೀವನದ ದೊಡ್ಡ ಅದೃಷ್ಟ. ಅಲ್ಲಿಗೆ ಹೋಗದ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬ ಎನ್ನಲು ತುಂಬಾ ಸಂತೋಷವಾಗುತ್ತದೆ. ಅದಕ್ಕಿಂತಲೂ ಹೆಚ್ಚು ಸಂತೋಷ ಎಂದರೆ ಹಿಂದುಸ್ಥಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.

ಇಂದು ರಾಜ್ಯಸಭೆಯಲ್ಲಿ ಅವರ ಕೊನೆಯ ದಿನ. ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್ ಅತ್ಯಂತ ಭಾವುಕರಾಗಿ ಭಾರತದ ಬಗೆಗಿನ ಪ್ರೀತಿಯನ್ನು ಹಂಚಿಕೊಂಡರು.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸ್ವರ್ಗ ಎಂಬುದು ನಿಜವಾಗಿಯೂ ಭಾರತದಲ್ಲಿದೆ ಎಂಬ ಸತ್ಯದ ಅರಿವಾಗುತ್ತದೆ. ನಾವು ನಮ್ಮನ್ನು ಭಾರತೀಯ ಮುಸಲ್ಮಾನರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ನೆಲದಲ್ಲಿ ಹುಟ್ಟಿದ್ದೇವೆ, ಈ ನೆಲದ ಸೇವೆ ಮಾಡಿ ಇದೇ ನೆಲದಲ್ಲಿ ಸಾಯುತ್ತೇವೆ ಎಂದು ಆಜಾದ್ ಭಾವುಕರಾಗಿ ನುಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡು ಗುಲಾಂ ನಬಿ ಆಜಾದ್​ ಅವರು, ಅಟಲ್​ಜೀ ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಬಿಕ್ಕಟ್ಟು ಯಾವುದೇ ಇರಲಿ, ಅದನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬುದನ್ನು ಕಲಿತಿರುವುದು ಕೂಡ ಅವರಿಂದಲೇ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಗುಲಾಬ್​ ನಬಿ ಅವರು, ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎನ್ನುವುದನ್ನು ತೋರಿಸಿಕೊಟ್ಟವರು ಮೋದಿಯವರು. ಎಷ್ಟೋ ಬಾರಿ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ನಾವಿಬ್ಬರೂ ವಾಗ್ಯುದ್ಧ ಮಾಡಿದ್ದಿದೆ. ಆದರೆ ಅದು ರಾಜಕೀಯ. ಅಲ್ಲಿ ಹಾಗೆಯೇ ಇರಬೇಕು. ಆದರೆ ಮೋದಿಯವರು ಎಂದಿಗೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡೇ ಇಲ್ಲ. ಅವರ ವಿರುದ್ಧ ರಾಜಕೀಯವಾಗಿ ಮಾತನಾಡಿದಾಗಲೂ ಅದು ರಾಜಕೀಯ ಅಷ್ಟೇ ಎಂದು ಅಂದುಕೊಂಡರೇ ವಿನಾ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುವವರು. ಇದು ಒಳ್ಳೆಯ ರಾಜಕಾರಣಿಯ ಗುಣ ಎಂದು ಶ್ಲಾಘಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss