Wednesday, August 17, 2022

Latest Posts

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೇಲೆ ತಹಸೀಲ್ದಾರ್ ದೌರ್ಜನ್ಯ: ಅಮಾನತಿಗೆ ಒತ್ತಾಯ

ಬಳ್ಳಾರಿ: ಶ್ರೀ ಗೌರಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಅಳವಡಿಸಿದ್ದ ಧ್ವನಿವರ್ಧಕ ತೆರವುಗೊಳಿಸುವ ವೇಳೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲು ಕಾರಣರಾದ ರಾಯಚೂರು ಜಿಲ್ಲೆಯ ದೇವದುರ್ಗ ತಹಸೀಲ್ದಾರ್ ಉಷಾರಾಣಿ ಅವರನ್ನು ಅಮಾನತ್ತುಗೊಳಿಸಬೇಕು, ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಇಲ್ಲಿನ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮೀತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳವರ ಮೂಲಕ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ‌ ಹಾಗೂ ಕಂದಾಯ ಇಲಾಖೆ ಖಾತೆ ಸಚಿವ ಆರ್. ಅಶೋಕ್ ಅವರಿಗೆ ಶುಕ್ರವಾರ ಮನವಿ ರವಾನಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಕೆ.ಶ್ರೀರಾಮುಲು ಅವರು‌ ಮಾತನಾಡಿ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ತಹಸೀಲ್ದಾರ್ ಉಷಾರಾಣಿ ಅವರು, ದೇವದುರ್ಗ ನಗರದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಅನುಮತಿ ಪಡೆದು ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದರೂ ನಾನಾ ಕಾಯ್ದೆ ಹೇಳುವ ಮೂಲಕ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿ, ಬಂಧಿಸಿದ್ದಾರೆ, ಇದು ತೀರಾ ಖಂಡನೀಯ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಅಳವಡಿಸಿದ್ದ ಧ್ವನಿವರ್ಧಕ ತೆರವುಗೊಳಿಸುವ ವೇಳೆ ನಮ್ಮ ಕಾರ್ಯಕರ್ತರ ‌ಮೆಲೆ ತಹಸೀಲ್ದಾರ್ ಅವರು ದೌರ್ಜನ್ಯ ಮಾಡಿ, ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹಿಂದೂ ಸಮಾಜದ ಪ್ರಮುಖ ದೊಡ್ಡ ಹಬ್ಬವಾದ ಸಾರ್ವಜನಿಕ ಗಣೆಶೋತ್ಸವಕ್ಕೆ ಸರ್ಕಾರ ವಿದ್ಯುತ್ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಪ್ರತಿ ವರ್ಷವೂ ತಡೆಯೋಡ್ಡಲಾಗುತ್ತಿದೆ. ಎಲ್ಲವನ್ನೂ ಸಹಿಸಿಕೊಂಡೇ ಸುಮಾರು ವರ್ಷಗಳಿಂದ ಆಚರಿಸಲಾಗುತ್ತದೆ. ಆದರೆ, ದೇವದುರ್ಗ ತಾಲೂಕು ತಹಸೀಲ್ದಾರ್ ಕಳೆದ ಎರಡು ದಿನಗಳ ಹಿಂದೆ ಗಣೇಶ ಉತ್ಸವ ಹಿನ್ನೆಲೆ‌ ಅಳವಡಿಸಿದ್ದ ಪೆಂಡಾಲನಲ್ಲಿ ಏಕಾ ಏಕಿ ನುಗ್ಗಿ, ಧ್ವನಿವರ್ಧಕವನ್ನು ತೆರವುಗೊಳಿಸಲು ಮುಂದಾದಾಗ ನಮ್ಮ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆದಿದೆ. ಇದನ್ನೇ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನಮ್ಮ ಕಾರ್ಯಕರ್ತರ ವಿರುದ್ದ ಸುಳ್ಳು ಪ್ರಕರಣ ನೀಡಿ‌ ಬಂಧಿಸಿದ್ದಾರೆ, ಇದೂ ತೀರಾ ಖಂಡನೀಯ, ಕೂಡಲೇ ತಹಸೀಲ್ದಾರ್ ಅವರನ್ನು ಅಮಾನತ್ತುಗೊಳಿಸಬೇಕು, ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಗೌರಿ ಗಣೇಶ ಮೂರ್ತಿ ಹಿನ್ನೆಲೆ ಅಳವಡಿಸಿದ್ದ ಧ್ವನಿವರ್ಧಕವನ್ನು ತೆರವುಗೊಳಿಸುವದಾದರೇ, ಊರಿನಲ್ಲಿರುವ ಮಸಿದಿಗಳಿಂದ ನಿತ್ಯ 5 ಬಾರಿ ಪ್ರಾರ್ಥನೆ ಮಾಡಲು ಕರ್ಕಶ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ. ಅದಕ್ಕೆ ಪರವಾನಿಗೆ ಇದೆಯೇ ಎಂದು ಪ್ರಶ್ನಿಸಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಖಜಾಂಚಿ ಭರತ್ ಕುಮಾರ್ ಸೋನಿ ಅವರು‌ ಮಾತನಾಡಿ, ಕಳೆದ 2005 ರಲ್ಲಿ ಸಾರ್ವಜನಿಕ ಧ್ವನಿವರ್ಧಕ ಹಾಗೂ ಶಬ್ದಮಾಲಿನ್ಯದ ಬಗ್ಗೆ ಮಾನ್ಯ ಸರ್ವೋಚ್ಚ ‌ನ್ಯಾಯಾಲಯ ನೀಡಿದ ತೀರ್ಪಿನಂತೆ ಅಧಿಕಾರಿಗಳು ಎಷ್ಟು ಬಾರಿ‌ ನಡೆದುಕೊಂಡಿದ್ದಾರೆ ಹಾಗೂ ಎಷ್ಟು‌ ಮಸೀದಿಗಳು ಧ್ವನಿವರ್ಧಕ ಉಪಯೊಗ ಮಾಡಲು ಪರವಾನಿಗೆಯನ್ನು ಪಡೆದಿವೆ. ಈ ವಿಚಾರದಲ್ಲಿ ಹಿಂದು ಮತ್ತು ಇತರೇ ಸಮಾಜಕ್ಕೆ ಮಲತಾಯಿ ಧೋರಣೆ ತೋರಿದಂತಾಗಲ್ಲವೇ ಎಂದು ಪ್ರಶ್ನಿಸಿದರು. ೨೦೦೫ ರಲ್ಲಿ ನ್ಯಾಯಾಲಯ‌ ನೀಡಿದ ಆದೇಶವನ್ನು ಎಲ್ಲರಿಗೂ ಸಮಾನವಾಗಿ ಜಾರಿಗೊಳಿಸಬೇಕು, ದೌರ್ಜನ್ಯ ವ್ಯಸಗಿದ ತಹಸೀಲ್ದಾರ್ ಅವರನ್ನು ಅಮಾನತ್ತುಗೊಳಿಸಬೇಕು, ಪ್ರಕರಣವನ್ನು ಹಿಂಪಡೆಯಬೇಕು, ನಿರ್ಲಕ್ಷಿಸಿದರೆ ಹಿಂದೂ ಜಾಗರಣ ವೇದಿಕೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಎಚ್.ಡಿ.ಗೋವಿಂದರಾಜ್, ರಾಹುಲ್‌ ಬಂಕಾಪೂರ್, ಬಾಲು, ಅಮರ್, ಮನೋಜ್, ವಿನೋದ್ ಸೇರಿದಂತೆ ವಿವಿಧ‌ ಮುಖಂಡರು, ಕಾರ್ಯಕರ್ತರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!