Tuesday, August 16, 2022

Latest Posts

ಹಿಂದೂ ಯುವತಿ ಹತ್ಯೆ ಪ್ರಕರಣ: ಹಿಂಜಾವೇಯಿಂದ ಮಡಿಕೇರಿ-ವೀರಾಜಪೇಟೆಯಲ್ಲಿ ಪ್ರತಿಭಟನೆ; ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ದಿಗಂತ ವರದಿ, ಮಡಿಕೇರಿ/ವೀರಾಜಪೇಟೆ:

ಹರ್ಯಾಣ ರಾಜ್ಯದ ಫರೀದಾಬಾದ್‍ನಲ್ಲಿ ತನ್ನನ್ನು ಪ್ರೀತಿಸಲು ನಿರಾಕರಿಸಿದ ಹಿಂದೂ ಯುವತಿಯನ್ನು ಹತ್ಯೆಗೈದ ಮತಾಂಧ ತೌಫಿಕ್‍ಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಲವ್ ಜಿಹಾದ್ ನಿಷೇಧಿಸಿ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಮಡಿಕೇರಿ ಹಾಗೂ ವೀರಾಜಪೇಟೆಗಳಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಹಿಂದೂ ಜಾಗರಣ ವೇದಿಕೆಯ ಮಡಿಕೇರಿ ತಾಲೂಕು ಕಾರ್ಯಕರ್ತರು, ಪ್ರೀತಿಸಲು ನಿರಾಕರಿಸಿದ ಹಿಂದೂ ಯುವತಿಯನ್ನು ನಡುಬೀದಿಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ ತೌಫಿಕ್‍ಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಲ್ಲದೆ ಲವ್ ಜಿಹಾದ್ ಮಟ್ಟ ಹಾಕಲು ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಪೊನ್ನಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೇರ, ತಾಲೂಕು ಮಾತೃ ಸುರಕ್ಷಾ ಸಂಯೋಜಕ್ ಅರುಣ್ ಕಡಗದಾಳು, ತಾಲೂಕು ನಿಧಿ ಪ್ರಮುಖ್ ವಿಜು ಹರೀಶ್ ಮೇಕೇರಿ, ವಲಯ ಪ್ರಮುಖರು, ಬಜರಂಗದಳದ ಜಿಲ್ಲಾ ಸಂಯೋಜಕ್ ಚೇತನ್ , ವಿಧ್ಯಾರ್ಥಿ ಪ್ರಮುಖ್ ವಿನಯ್, ಬಿಜೆಪಿ ನಗರ ಅಧ್ಯಕ್ಷ ಮನು ಮಂಜುನಾಥ್, ನಗರ ಪ್ರಮುಖ್ ಜಗದೀಶ್ ಹಾಗೂ ತಾಲೂಕಿನ ವಿವಿಧ ಹಿಜಾವೇ ಘಟಕಗಳ ಕಾರ್ಯಕರ್ತರು ಭಾಗವಹಿಸಿದ್ದರು.
ವೀರಾಜಪೇಟೆ ವರದಿ: ಹಿಂದೂ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ವೀರಾಜಪೇಟೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಮುಖರಾದ ಪ್ರಿನ್ಸ್ ಗಣಪತಿ ಅವರು, ದೇಶದಲ್ಲಿ ಇಸ್ಲಾಮಿಕ್ ಮತಾಂಧರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶ ವಿರೋಧಿ ಮತ್ತು ಹಿಂದು ವಿರೋಧಿ ನೀತಿಯೊಂದಿಗೆ ಸಮಾಜಘಾತುಕ ಕೃತ್ಯದಲ್ಲಿ ತೊಡಗಿದ್ದಾರೆ. ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಲವ್ ಜಿಹಾದ್ ಮೂಲಕ ತಮ್ಮ ಬಲೆಗೆ ಬೀಳಿಸಿ ಸಮಾಜಘಾತುಕ ಹಾಗೂ ಭಯೋತ್ಪಾದನೆ ಕೃತ್ಯದಲ್ಲಿಯೂ ಬಳಕೆ ಮಾಡುತ್ತಿರುವುದು ಕೇರಳದಂತಹ ರಾಜ್ಯದಲ್ಲೂ ಸಾಬೀತಾಗಿದೆ. ಅದೇ ರೀತಿ ಹರಿಯಾಣ ರಾಜ್ಯದ ಫರಿದಾಬಾದ್‍ನಲ್ಲಿ ಮತಾಂಧನ ಪ್ರೀತಿಯನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಹಿಂದು ಯುವತಿಯನ್ನು ನಡು ರಸ್ತೆಯಲ್ಲಿ ಹತ್ಯೆಗೈದ ಮತಾಂಧ ತೌಫಿಕ್‍ಗೆ ಗಲ್ಲು ಶಿಕ್ಷೆ ನೀಡಬೇಕು. ಸಮಾಜಘಾತುಕ ಕೃತ್ಯಕ್ಕೆ ಕಡಿವಾಣ ಹಾಕಲು ಲವ್ ಜಿಹಾದ್ ನಿಷೇಧಿಸಲು ಕಾನೂನು ತರಬೇಕು ಎಂದು ಆಗ್ರಹಿಸಿದರು.
ಹಿಂದು ಜಾಗರಣ ವೇದಿಕೆ ಮತ್ತು ಸಂಘ ಪರಿವಾರದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬಿ.ವಿ.ಹೇಮಂತ್, ಮೇವಡ ಅಯ್ಯಣ್ಣ, ಬಿ.ಎನ್.ಯೋಗೇಶ್, ಗಣೇಶ್ ಗೌಡ, ಅಂಜಪರವಂಡ ಅನಿಲ್, ಬೊಳ್ಳಚಂಡ ಪ್ರಕಾಶ್, ವಿವೇಕ್ ರೈ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್, ಸದಸ್ಯರಾದ ಜೂನಾ, ಮಹದೇವ್ ಹಾಗೂ ತಾಲೂಕಿನ ಸಂಘ ಪರಿವಾರದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss