spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಿಂದೂ ರುದ್ರ ಭೂಮಿಯ ಶಿವನ ವಿಗೃಹ ಪೀಠದಲ್ಲಿ ಟಿಕ್ ಟಾಕ್: ನಾಲ್ವರು ಯುವಕರ ಬಂಧನ

- Advertisement -Nitte

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಶಿವನ ಬೃಹತ್ ವಿಗ್ರಹದ ಪೀಠದಲ್ಲಿ ಶೂಧರಿಸಿ ಅಸಭ್ಯವಾಗಿ  ಟಿಕ್ ಟಾಕ್ ಮಾಡಿ  ಧಾರ್ಮಿಕ ನಂಬಿಕೆಗೆ ಘಾಸಿಯಾಗುವಂತ ಕೃತ್ಯವೆಸಗಿದ ಆರೋಪದಲ್ಲಿ ನಾಲ್ವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.   ಸಜೀಪನಡು ಗ್ರಾಮದ ಮೊಹಮ್ಮದ್ ಮಸೂದ್ (20), ಮೊಹಮ್ಮದ್ ಅಜೀಮ್ (20), ಅಬ್ದುಲ್ ಲತೀಫ್ (20), ಮೊಹಮ್ಮದ್ ಅರ್ಫಾಜ್ (20) ಬಂಧಿತರಾಗಿದ್ದಾರೆ.  ಆರೋಪಿಗಳು ಶನಿವಾರದಂದು ಕಂಚಿನಡ್ಕ ಪದವಿನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ  ಬೃಹತ್ ಗಾತ್ರದ ಶಿವನವಿಗ್ರಹವಿದ್ದು,ಇದರ ಪೀಠದಲ್ಲಿ ಶೂ ಧರಿಸಿಕೊಂಡು ಅಸಭ್ಯವಾಗಿ ವರ್ತಿಸಿ ಟಿಕ್ ಟಾಕ್ ಮಾಡಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಾಪ್ರವೃತ್ತರಾದ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ತಂಡ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss