Tuesday, June 28, 2022

Latest Posts

ಹಿಂದೂ ವಿರೋಧಿ ಹೇಳಿಕೆ: ಪಾಕ್ ಸಚಿವನ ವಜಾಗೊಳಿಸಿದ ಇಮ್ರಾನ್ ಖಾನ್

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಹಿತಿ ಸಚಿವ ಫಯಾಜುಲ್ ಚೋಹನ್ ಅವರನ್ನು ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ವಜಾಗೊಳಿಸಿದ್ದಾರೆ.
ಚೋಹನ್ ಹಿಂದೂ ವಿರೋಧಿ ಹೇಳಿಕೆಗಳಿಗೆ ಸಾಮಾಜಿ ಮಾಧ್ಯಮದಲ್ಲಿ ತೀವ್ರ ಟೀಕೆ ಗುರಿಯಾಗಿದ್ದನ್ನು ಗಮನಿಸಿದ ಪ್ರಧಾನಿ ಇಮ್ರಾನ್ ಖಾನ್ ಅವರು ಅವರನ್ನು ವಜಾಗೊಳಿಸುವಂತೆ ಆದೇಶಿಸಿದ್ದಾರೆ.
ಇಮ್ರಾನ್ ಖಾನ್ ಅವರು ಪ್ರತಿಪಕ್ಷಗಳನ್ನು ಎದುರಿಸಲು ಪ್ರಾಂತೀಯ ಮಾಧ್ಯಮ ತಂಡದ ಅಸಮರ್ಥತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಅವರನ್ನು ಮತ್ತೆ ವಜಾ ಮಾಡಲಾಗಿದೆ.
ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನ ಫೈರ್‌ಬ್ರಾಂಡ್ ನಾಯಕ ಚೋಹನ್ ಅವರನ್ನು 2019ರ ಫೆಬ್ರವರಿಯಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss