Sunday, August 14, 2022

Latest Posts

ಹಿಡಕಲ್ ಜಲಾಶಯ ಶೇ.90 ರಷ್ಟು ಭರ್ತಿ: 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ!

ಬೆಳಗಾವಿ : ಬಾಗಲಕೋಟೆ, ಬೆಳಗಾವಿ, ವಿಜಯಪುರ ಮೂರು ಜಿಲ್ಲೆಗಳ ಜೀವನಾಡಿಯಾಗಿರುವ ಜಿಲ್ಲೆಯ ಹುಕ್ಕೇರಿ ತಾಲೂಕಿನ
ಹಿಡಕಲ್ ಜಲಾಶಯ ಶೇ.90 ರಷ್ಟು ಭರ್ತಿಯಾದ ಹಿನ್ನಲೆಯಲ್ಲಿ ಸೋಮವಾರ 10 ಕ್ರಸ್ಟ್‌ ಗೇಟ್ ಗಳ ಮೂಲಕ 5 ಸಾವಿರ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ನದಿಯ ತೀರದ ಜನರಿಗೆ ಎಚ್ಚರಿಕೆ ಇರುವಂತೆ ನೀರಾವರಿ ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.
ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. 51 ಟಿಎಂಸಿ ನೀರು ಸಂಗ್ರಹದ ಡ್ಯಾಂನಲ್ಲಿ 48 ಟಿಎಂಸಿ ನೀರು ಸಂಗ್ರವಾಗಿದೆ. ಜಲಾಶಯಕ್ಕೆ ಸುಮಾರು 20 ಸಾವಿರ ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ನೀರಿನ ಪ್ರಮಾಣದಲ್ಲಿ ಶೇ.50 ರಷ್ಟು ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗಿದೆ.
2 ಸಾವಿರ ಕ್ಯೂಸೆಕ್ಸ ಎಡದಂಡೆ ಕಾಲುವೆ ಹಾಗೂ 2 ಕ್ಯೂಸೆಕ್ಸ ಸಾವಿರ ಪವರ್ ಹೌಸ್ ಮೂಲಕ ಹಾಗೂ ನದಿಗೆ 5 ಸಾವಿರ ಕ್ಯೂಸೆಕ್ಸ ಸೇರಿದಂತೆ ಒಟ್ಟು 9 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಘಟಪ್ರಭಾ ನದಿಯ ಗೋಕಾಕ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮದ ನದಿ ಪಾತ್ರದ ಜನರಿಗೆ ಸುರಕ್ಷಿತ ಇರುವಂತೆ ಸೂಚನೆ ನೀಡಲಾಗಿದೆ.
ಕಳೆದ ವರ್ಷ ಇದೇ ಸಮಯದಲ್ಲಿ‌ 90 ಸಾವಿರ ಕ್ಯೂಸೆಕ್ಸ ನೀರು ಬಿಡಲಾಗಿತ್ತು. ಇದರಿಂದ ಗೋಕಾಕ ಸಂಪೂರ್ಣ ಪ್ರವಾಹದಲ್ಲಿ ಸಿಲುಕಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss