ಶಿಮ್ಲಾ: ಕೇರಳದಲ್ಲಿ ಸಿಡಿಮದ್ದು ಒಳಗೊಂಡ ಅನಾನಸ್ ತಿನ್ನಿಸಿ ಗರ್ಭಿಣಿ ಆನೆಯೊಂದರ ದಾರುಣ ಹತ್ಯೆಗೈದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವೊಂದಕ್ಕೆ ಪಟಾಕಿ ಸುತ್ತಿಡಲಾದ ಗೋಧಿ ಹಿಟ್ಟು ತಿನ್ನಿಸಲಾಗಿದ್ದು, ಪಟಾಕಿ ಸ್ಫೋಟಗೊಂಡಿದ್ದರಿಂದ ಹಸು ತೀವ್ರ ಗಾಯಕ್ಕೆ ತುತ್ತಾಗಿದೆ.
ಬಿಸ್ಲಾಪುರ ಜಿಲ್ಲೆಯ ಜಂಡುಟ್ಟಾ ಪ್ರದೇಶದ ರೈತನೊಬ್ಬನ ಬೆಳೆಗಳನ್ನು ನಾಶ ಮಾಡಿದ್ದರಿಂದ ಸಿಟ್ಟಾಗಿದ್ದ ಆತ ಹಸುವನ್ನು ಹತ್ಯೆಗೈಯಲು ನಿರ್ಧರಿಸಿದ್ದು, ಇದಕ್ಕಾಗಿ ಗೋಧಿ ಹಿಟ್ಟಿನೊಳಗೆ ಸಿಡಿಮದ್ದನ್ನು ಇಟ್ಟಿದ್ದಾನೆ. ಸಿಡಿಮದ್ದು ಸೊಧೀಟವಾಗಿದ್ದರಿಂದ ಬಾಯಿಯೊಳಗೆ ಗಾಯವಾಗುವಾಗಿ ರಕ್ತಸ್ರಾವವಾಗುತ್ತಿತ್ತು ಹಾಗೂ ತೀವ್ರ ನೋವಿನಿಂದ ಮುಖ ಊದಿಕೊಂಡಿದೆ. ಪ್ರಸ್ತುತ ಹಸುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವಾಕರ್ ಶರ್ಮಾ ತಿಳಿಸಿದ್ದಾರೆ.