ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಹಿಮಾಚಲ ಪ್ರದೇಶ ಸರ್ಕಾರದ ಬಜೆಟ್ ಅಧಿವೇಶನದ ವೇಳೆ ವಿಪಕ್ಷ ನಾಯಕ ಮತ್ತು ನಾಲ್ವರು ಕಾಂಗ್ರೆಸ್ ಎಮ್ಎಲ್ಎಗಳು ಅಲ್ಲಿನ ರಾಜ್ಯಪಾಲರ ಮೇಲೆ ಹಲ್ಲೆ ನಡೆಸಿದ್ದು, ಈ ಹಿನ್ನೆಲೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಇಂದು ಅಧಿವೇಶನದಲ್ಲಿ ಆರಂಭ ಭಾಷಣ ಮಾಡಿ ವಾಪಸ್ಸಾಗುವ ವೇಳೆ ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ವಿಪಕ್ಷ ನಾಯಕ ಮುಕೇಶ್ ಅಗ್ನಿಹೋತ್ರಿ, ಎಮ್ಎಲ್ಎಗಳಾದ ಹರ್ಷ ವರ್ಧನ್ ಚೌಹಾಣ್, ಸಂದರ್ ಸಿಂಗ್ ಥಾಕೂರ್, ಸತ್ಪಾಲ್ ರಾಯ್ಜಾದ, ಮತ್ತು ವಿನಯ್ ಕುಮಾರ್ ಅಮಾನತುಗೊಂಡವರು.