Tuesday, June 28, 2022

Latest Posts

ಹಿರಿಯ ಆರೆಸ್ಸೆಸ್ ಚಿಂತಕ ಮಾ.ಗೋ. ವೈದ್ಯ ಇನ್ನಿಲ್ಲ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚಿಂತಕ, ಸಂಘದ ಮೊದಲ ವಕ್ತಾರರಾಗಿದ್ದ ಮಾಧವ್ ಗೋವಿಂದ್ ವೈದ್ಯ ಅವರು ಶನಿವಾರ ಅಪರಾಹ್ನ ನಿಧನರಾಗಿದ್ದಾರೆ .ಅವರಿಗೆ 97 ವರ್ಷ ಪ್ರಾಯವಾಗಿತ್ತು.
ಶನಿವಾರ ಅಪರಾಹ್ನ 3-35ಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಾ.ಗೋ.ವೈದ್ಯ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಇತ್ತಿಚೀಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಬಳಿಕ ಚೇತರಿಸಿಕೊಂಡಿದ್ದರು. ಆದಾಗ್ಯೂ, ಶುಕ್ರವಾರ ಇದ್ದಕ್ಕಿದ್ದಂತೆ ಆರೋಗ್ಯ ಕ್ಷೀಣಿಸಿದ್ದು, ಇಂದು ಮೃತಪಟ್ಟಿರುವುದಾಗಿ ಅವರ ಮೊಮ್ಮಗ ವಿಷ್ಣು ವೈದ್ಯ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅವರು ಸಂಘದ ದ್ವಿತೀಯ ಸರಸಂಘಚಾಲಕ್ ಗುರೂಜಿಯವರಿಂದ ಹಿಡಿದು ಎಲ್ಲ ಸರಸಂಘಚಾಲಕರ ಜೊತೆ ಕೆಲಸ ಮಾಡಿದವರು. ಸಂಸ್ಕೃತ ಉಪನ್ಯಾಸಕರಾಗಿ, ನಾಗಪುರ ‘ತರುಣಭಾರತ್’ ಪತ್ರಿಕೆ ಸಂಪಾದಕರಾಗಿ, ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯರಾಗಿ ಬಹುಶ್ರುತ ಚಿಂತಕ-ಸಾಧಕರಾಗಿದ್ದವರು.
ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 9.30ಕ್ಕೆ ನಾಗಪುರದ ಅಂಬಝಾರಿ ಘಾಟ್ ರುದ್ರಭೂಮಿಯಲ್ಲಿ ನಡೆಯಲಿದೆ.ಅವರ ನಿಧನಕ್ಕೆ ಸರಸಂಘಚಾಲಕ್ ಮೋಹನ್ ಭಾಗ್ವತ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ರಾಷ್ಟ್ರೀಯ ಗಣ್ಯರು , ಸಮಾಜದ ವಿವಿಧ ವಲಯಗಳ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಕೃತ ಸಂಘದ ಸಹಸರಕಾರ್ಯವಾಹರಾಗಿರುವ ಡಾ.ಮನಮೋಹನ್ ವೈದ್ಯ ಅವರು ಮಾ.ಗೋ.ವೈದ್ಯ ಅವರ ಸುಪುತ್ರರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss