ಹಿಂದಿ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಅಭಿಲಾಷ್ ಸೋಮವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ೭೪ ವರ್ಷದ ಅಭಿಲಾಷ್ ಮುಂಬೈನ ಗೋರೆಗಾಂವ್ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಒಂದು ವರ್ಷದಿಂದ ಅಭಿಲಾಷ್ ಅವರು ಲಿವರ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ.
ಪ್ರಾರ್ಥನೆ ಗೀತೆ ಎನ್ನುವಂತಿದ್ದ ಇತ್ನಿ ಶಕ್ತಿ ಹಮೇ ದೇನಾ ದಾತಾ, ಮನ್ ಕಿ ವಿಶ್ವಾಸ್ ಕರ್ಮ್ಝೋ ಹೋ ನಾ….’’ ಹಾಡನ್ನು ಬರೆದವರು ಇದೇ ಅಭಿಲಾಷ್. ಲಾಲ್ ಚೂಡಾ (೧೯೮೪), ಹಲ್ಚುಲ್ (೧೯೯೫) ಮತ್ತು ಜೀತೆ ಹೇನ್ ಶಾನ್ ಸೆ (೧೯೮೮) ಚಿತ್ರಗಳಿಂದ ಅಭಿಲಾಷ್ ಗುರುತಿಸಿಕೊಂಡಿದ್ದರು.