ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತೀಯ ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಶ್ರೀಕಾಂತ್ ಅವರು ದೆಹಲಿಯಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ಶ್ರೀಕಾಂತ್ ಇನ್ಸ್ಪೆಕ್ಟರ್ ಜನರಲ್ ನ್ಯೂಕ್ಲಿಯರ್ ಸೇಫ್ಟಿ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಕಮಾಂಡೆಂಟ್ ನೇಮಕಾತಿಗಳನ್ನು ನಿರ್ವಹಿಸಿದ್ದರು. ಹಾಗೆಯೇ ಪ್ರಾಜೆಕ್ಟ್ ಸೀಬರ್ಡ್ ನ ಮಹಾನಿರ್ದೇಶಕರಾಗಿದ್ದರು ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.