ಹೊಸ ದಿಗಂತ ವರದಿ, ಹಾವೇರಿ:
ಹಿರಿಯ ಪತ್ರಕರ್ತ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿಗಾರರಾಗಿದ್ದ ಗಂಗಾಧರ ಹೂಗಾರ ಭಾನವಾರ ಬೆಳಿಗ್ಗೆ 7.30ಕ್ಕೆ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು.
ಗಂಗಾಧರ ಹೂಗಾರ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು, ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಹಾವೇರಿಯ ಹೆಗ್ಗೆರಿಕೆರೆ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ನೆರವೇರಿತು.
ಪತ್ರಕರ್ತ ಗಂಗಾಧರ ಹೂಗಾರ ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಡಾವಣೆಗೇರಿ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಿನ್ನೆ ರಾತ್ರಿ ಬೆಂಗಳೂರಿನಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸಂತಾಪ
ಹಿರಿಯ ಪತ್ರಕರ್ತರ ಗಂಗಾಧರ ಹೂಗಾರ ಅವರ ನಿಧನಕ್ಕೆ ಜಿಲ್ಲೆಯ ವಿದ್ಯುನ್ಮಾನ ಹಾಗೂ ನುದ್ರಣ ಮಾಧ್ಯಮ ಪ್ರತಿನಿಧಿಗಳು, ಸಚಿವರಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ನೆಹರು ಓಲೇಕಾರ, ನಗರಸಭಾ ಅಧ್ಯಕ್ಷ ಸಂಜೀವಕಮಾರ ನೀರಲಗಿ, ಎಂ.ಎಂ.ಹಿರೇಮಠ, ಜಿ.ಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಸೇರಿದಂತೆ ಇನ್ನು ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.