ಧಾರವಾಡ: ಕಲ್ಯಾಣ ನಗರದ ಚೆಂಬಳಕಿನ ನಿವಾಸಕ್ಕೆ ಭೇಟಿನೀಡಿದ ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳು ಹಿರಿಯ ಸಾಹಿತಿ ನಾಡೋಜ ಡಾ.ಚನ್ನವೀರ ಕಣವಿ ಅವರ ಸಾಹಿತ್ಯ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಕಳೆದ ಸೆ.೨೩ರಂದು ನಡೆದ ೫ನೇ ಘಟಿಕೋತ್ಸವದಲ್ಲಿ ಡಾ. ಚೆನ್ನವೀರ ಕಣವಿ ಭಾಗವಹಿಸಿ ಪದವಿ ಸ್ವೀಕರಿಸಲು ಸಾಧ್ಯವಾಗದ ಕಾರಣ ಸೋಮವಾರ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಪ್ಪ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಪರೀಕ್ಷಾ ವಿಭಾಗದ ನಿಯಂತ್ರಕ ಪ್ರೊ. ಬಿ.ಕೆ.ಕೆರೂರ, ಡೀನ್ ಪ್ರೊ. ಬಸವರಾಜ ಡೋಣೂರ, ಹಿರಿಯ ಸಾಹಿತಿ ಡಾ. ಗುರಲಿಂಗ ಕಾಪಸೆ ಇದ್ದರು.