ಹೊಸ ದಿಗಂತ ವರದಿ, ಹಾವೇರಿ:
ಹಿರೇಕೆರೂರ ಪಟ್ಟಣ ಪಂಚಾಯತಿಗೆ ಗುರುಶಾಂತ ಯತ್ತಿನಹಳ್ಳಿ ಸಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಧಾ ಚಿಂದಿ ಅವಿರೋಧವಾಗಿ ಆಗುವ ಮೂಲಕ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಪಟ್ಟಣ ಪಂಚಾಯತಿಯ ಒಟ್ಟು 20 ಸ್ಥಾನಗಳು. ಇವರಲ್ಲಿ ಓರ್ವರು ನಿಧರಾಗಿರುವ ಕಾರಣಕ್ಕೆ ಆ ಸ್ಥಾನ ಇನ್ನು ತೆರವಾಗಿದೆ. ಉಳಿದ 19 ಸದಸ್ಯರಲ್ಲಿ ಸದಸ್ಯರಲ್ಲಿ ಬಿಜೆಪಿಯ 14, ಪಕ್ಷೇತರ 2 ಸದಸ್ಯರು ಸೇರಿ ಅಧಿಕಾರದ ಚುಕ್ಕಾಣೆ ಹಿಡಿದುಕೊಂಡಿದ್ದಾರೆ. ಉಳಿದ ಇಬ್ಬರು ಪಕ್ಷೇತರರು ಹಾಗೂ ಓರ್ವ ಜೆಡಿಎಸ್ ಅಭ್ಯರ್ಥಿಗಳು ಯಾವುದೇ ಪಕ್ಷವನ್ನು ಸೇರಿಕೊಳ್ಳದೆ ಆಡಳಿತದಿಂದ ಹೊರಗುಳಿದಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾಯತಿಗೆ ಚುನಾವಣೆ ಆದ ಸಂದರ್ಭಲ್ಲಿ 7 ಬಿಜೆಪಿ, 8 ಕಾಂಗ್ರೆಸ್, 4 ಪಕ್ಷೇತರರು ಹಾಗೂ ಓರ್ವ ಜೆಡಿಎಸ್ನಿಂದ ಆಯ್ಕೆ ಆಗಿದ್ದರು. ಪ್ರಸಕ್ತ ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ ಬಿಜೆಪಿ ಸೇರ್ಪಡೆಯಿಂದಾಗಿ ಅವರ ಬೆಂಬಲಿಗರಾಗಿದ್ದ ಪಟ್ಟಣ ಪಂಚಾಯತಿಯ ೮ ಸದಸ್ಯರು ಬಿಜೆಪಿ ಸೇರ್ಪಡೆ ಆಗಿದ್ದರು.
ಇವರಲ್ಲಿ ಇಬ್ಬರು ಸದಸ್ಯರು ನಿಧನರಾಗಿದ್ದರು ಹೀಗಾಗಿ ಎರಡು ಸ್ಥಾನಗಳು ತೆರವಾಗಿದ್ದವು. ಇತ್ತೀಚೆಗೆ ಒಂದು ಸ್ಥಾನಕ್ಕೆ ಚುನಾವಣೆ ಜರುಗಿದ ಸಂದರ್ಭದಲ್ಲಿ ಆ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತ್ತು. ಇನ್ನು ಒಂದು ಸ್ಥಾನಕ್ಕೆ ಚುನಾವಣೆ ಜರುಗಬೇಕಾಗಿದೆ.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಕೃಷಿ ಸಚಿವ ಬಿ.ಸಿ.ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಮುಖಂಡರಾದ ತಾ.ಪಂ ಅಧ್ಯಕ್ಷ ರಾಜು ಬಣಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಬಿಜೆಪಿ ತಾಲೂಕಾಧ್ಯಕ್ಷ ಶಷ್ಮುಖಯ್ಯ ಮಳಿಮಠ, ರಾಜಶೇಖರ ಹಂಪಾಲಿ, ದೊಡ್ಗೌಡ ಪಾಟೀಲ, ಆರ್.ಎನ್.ಗಂಗೋಳ, ಎಸ್.ಆರ್.ಅಂಗಡಿ, ಶಿವಕುಮಾರ ಬುಕ್ಕಶೆಟ್ಟರ, ವಿರೇಶ ಹಾರನಹಳ್ಳಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿದ್ದರು.
ನಿರೀಕ್ಷೇಯಂತೆ ಅಧಿಕಾರಕ್ಕೆ ಬಂದಿದೆ
ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿಗೆ ಬಹುಮತವಿದ್ದ ಕಾರಣಕ್ಕೆ ನಿರೀಕ್ಷೇಯಂತೆ ಅಧಿಕಾರಕ್ಕೆ ಬಂದಿದೆ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹಿಂದಿಗಿಂತಲೂ ಬರುವ ದಿನಗಳಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡುವುದಕ್ಕೆ ಹೆಚ್ಚಿನ ಆದ್ಯೆತನ್ನು ನೀಡಲಾಗುವುದು.
ಬಿ.ಸಿ.ಪಾಟೀಲ, ಶಾಸಕ, ಕೃಷಿ ಸಚಿವ
ಅಭಿವೃದ್ಧಿಗೆ ಹೆಚ್ಚಿನ ಅನುದಾನ
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವುದರಿಂದ ಮತ್ತು ನಾನು ಮತ್ತು ಬಿ.ಸಿ.ಪಾಟೀಲರು ಇದೇ ಪಟ್ಟಣದವರೇ ಆಗಿರುವುದರಿಂದ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರಲಾಗುವುದು. ಆನತೆಯ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳನ್ನು ತರಲಾಗುವುದು. ರಸ್ತೆ, ಬಿದಿ ದೀಪ, ಉತ್ತಮ ಚರಂಡಿ ವ್ಯವಸ್ಥೆಗಳನ್ನು ಮಾಡುವುದಕ್ಕೆ ಆದ್ಯೆತಯನ್ನು ನೀಡಲಾಗುವುದು.
ಯು.ಬಿ.ಬಣಕಾರ, ಉಗ್ರಾಣ ನಿಗಮದ ಅಧ್ಯಕ್ಷ