ದೋಸೆ, ಚಪಾತಿಗಳ ಜೊತೆಗೆ ಬೇಳೆ ಚಟ್ನಿ ತಿಂದು ಬೇಸರವಾಗಿದ್ದರೆ, ಇಲ್ಲಿದೆ ನೋಡಿ ಸಿಂಪಲ್ ಪುದೀನ ಚಟ್ನಿ ರೆಸಿಪಿ.
5 ನಿಮಿಷದಲ್ಲಿ ತಯಾರಾಗಲಿದೆ ಈ ಪುದೀನ ಚಟ್ನಿ.. ಹಾಗಿದ್ದರೆ ಬನ್ನಿ ರುಚಿಕರವಾದ ಪುದೀನಾ ಚಟ್ನಿ ಮಾಡೋದು ಹೇಗೆ ಎಂದು ತಿಳಿಯೋಣ..
ಬೇಕಾದ ಪದಾರ್ಥಗಳು
ಪುದೀನ
ತೆಂಗಿನತುರಿ
ಕೊತ್ತಂಬರಿ
ಬೆಳ್ಳುಳ್ಳಿ
ಟೊಮಾಟೋ
ಪುಟಾಣಿ
ಉಪ್ಪು
ಹುಣಸೆಹಣ್ಣು
ಹಸಿಮೆಣಸಿನಕಾಯಿ
ಮಾಡುವ ವಿಧಾನ:
ಮೊದಲಿಗೆ ಮಿಕ್ಸಿಯಲ್ಲಿ ಪುದೀನಾ, ತೆಂಗಿನ ತುರಿ, ಟೊಮಾಟೋ, ಹುಣಸೆಹಣ್ಣು, ಹಸಿಮೆಣಸಿನಕಾಯಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ
ನಂತರ ಅದಕ್ಕೆ ಕೊತ್ತಂಬರಿ, ಬೆಳ್ಳುಳ್ಳಿ, ಪುಟಾಣಿ, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಂಡರೆ ಸಿದ್ಧವಾಗಲಿದೆ ಸೂಪರ್ ಪುದೀನ ಚಟ್ನಿ.